ಕಲರ್ಸ್ ಕನ್ನಡ ವಾಹಿನಿಯಲ್ಲಿ ವಿನೋದ್ ದೋಂಡಾಳೆ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಮಿಥುನರಾಶಿ ಧಾರಾವಾಹಿಯು ಯಶಸ್ವಿಯಾಗಿ ತನ್ನ 400 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.
ಭಿನ್ನ ಮನಸ್ಥಿತಿಯುಳ್ಳ ಈ ಜೋಡಿ ಹೇಗೆ ಮದುವೆಗೆ ಒಪ್ಪಿಕೊಳ್ಳುತ್ತಾರೆ ಎನ್ನುವ ಕಥೆಯನ್ನು ಈ ಧಾರವಾಹಿ ಹೊಂದಿದ್ದು, ಧಾರಾವಾಹಿ ಪ್ರಿಯರ ಮನತಣಿಸಿದೆ
ಸ್ವಾಮಿನಾಥನ್ ಅನಂತರಾಮನ್ ಮಿಥುನ್ ಪಾತ್ರ ನಿರ್ವಹಿಸಿದರೆ, ವೈಷ್ಣವಿ ರಾಶಿ ಪಾತ್ರದಲ್ಲಿ ನಟಿಸಿದ್ದಾರೆ. ಮಿಥುನ ರಾಶಿಯಾಗಿ ಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟಿರುವ ಸ್ವಾಮಿನಾಥ ಹಾಗೂ ವೈಷ್ಣವಿ ಮೊದಲ ಧಾರಾವಾಹಿಯಲ್ಲೇ ವೀಕ್ಷಕರಿಗೆ ಹತ್ತಿರವಾಗಿಬಿಟ್ಟಿದ್ದಾರೆ. ಹರಿಣಿ ಶ್ರೀಕಾಂತ್, ಕೋಳಿ ರಮ್ಯಾ , ಪೂಜಾ ಸೇರಿದಂತೆ ಹಲವರು ನಟಿಸಿದ್ದಾರೆ.