ಬೆಂಗಳೂರು: ಜೊತೆಯಲಿ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಅದರಲ್ಲೂ ಲಾಕ್ಡೌನ್ ನಂತರ ಶೂಟಿಂಗ್ ಸ್ಥಗಿತಗೊಂಡಿದ್ದು, ಮನೆಯಲ್ಲೇ ವರ್ಕ್ಔಟ್, ನೃತ್ಯ ಹೀಗೆ ಅನೇಕ ಫನ್ನಿ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿರುತ್ತಾರೆ.
- https://www.instagram.com/reel/COxcym3gLua/?igshid=yuby9ynqyo6g
ಈ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ, ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡುವಂತೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮೇಘಾಶೆಟ್ಟಿ ನೃತ್ಯ ಮಾಡಿದ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ. “ನಿಮ್ಮ ನೃತ್ಯ ತುಂಬಾ ಚೆನ್ನಾಗಿದೆ” “ನೀವು ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲ ಎಂದೆಲ್ಲಾ ಹಾಡಿ ಹೊಗಳಿದ್ದಾರೆ.
ಓದಿ:ಬಿಗ್‌ಬಾಸ್ ಟ್ರೋಫಿಗಿಂತ ಒಲವಿನ ಗೆಳೆಯನನ್ನು ಪಡೆದಿದ್ದೇನೆ: ದಿವ್ಯಾ ಉರುಡುಗ
ಕೆಲ ದಿನಗಳಿಂದ ಮೇಘಾ ಶೆಟ್ಟಿ ವರ್ಕ್ ಔಟ್ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿದ್ದು, ಅವರ ವರ್ಕ್ಔಟ್ ವಿಡಿಯೋಗಳು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಮೇಘಾ ಶೆಟ್ಟಿ ಪ್ರಸ್ತುತ ಜೊತೆ ಜೊತೆಯಲ್ಲಿ ಸೇರಿದಂತೆ ಕೆಲವು ಆಲ್ಬಂ ಸಾಂಗ್ ಪ್ರಾಜೆಕ್ಟ್ಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಅಷ್ಟೇ ಅಲ್ಲ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬ್ಬಲ್ ರೈಡಿಂಗ್ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಬಣ್ಣದ ಲೋಕಕ್ಕೆ ಅನಿರೀಕ್ಷಿತವಾಗಿ ಕಾಲಿಟ್ಟ ಮೇಘಾ ಶೆಟ್ಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ, ಒಳ್ಳೆಯ ಅವಕಾಶಗಳು ಸಿಕ್ಕರೆ ಹಿರಿತೆರೆಯಲ್ಲಿಯೂ ನಟಿಸುವುದಾಗಿ ಹೇಳಿದ್ದಾರೆ.
- https://www.instagram.com/reel/COzOc9PAHgk/?igshid=178ubqm1h7s9p