ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ನಾಯಕ ರಾಮಣ್ಣನ ತಮ್ಮ ನಂಜುಂಡ ಆಲಿಯಾಸ್ ಕನ್ವರ್ ಆಗಿ ನಟಿಸಿ ಮನೆ ಮಾತಾಗಿದ್ದ ರಾಣವ್ ಆರ್. ಗೌಡ ಸದ್ಯ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. 'ವರಲಕ್ಷ್ಮಿ ಸ್ಟೋರ್ಸ್' ನಂತರ ' ಮತ್ತೆ ವಸಂತ' ಧಾರಾವಾಹಿಯಲ್ಲಿ ನಟಿಸಿದ್ದ ಅವರು ಈಗ 'ಕಮಲಿ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.
- " class="align-text-top noRightClick twitterSection" data="
">
'ಕಮಲಿ' ಧಾರಾವಾಹಿಯಲ್ಲಿ ಹೊಸದಾಗಿ ಮೂರು ಪಾತ್ರಗಳು ಸೇರ್ಪಡೆಯಾಗಿರುವುದು ನಿಮಗೆ ತಿಳಿದ ವಿಚಾರ. ಈ ಮೂವರು ಪಾತ್ರಧಾರಿಗಳಲ್ಲಿ ಅಮರ್ ಕೂಡಾ ಒಬ್ಬರು. ಅಂಬಿ ಅಲಿಯಾಸ್ ಅಂಬಿಕ ಅಣ್ಣ ಅಮರ್ ಆಗಿ ರಾಣವ್ ನಟಿಸುತ್ತಿದ್ದಾರೆ. ಅಲ್ಲಿ ಇಲ್ಲಿ ಕಳ್ಳತನ ಮಾಡಿಕೊಂಡೇ ಜೀವನ ಸಾಗಿಸುವ ಅಂಬಿಗೆ ಅಜ್ಜಿ ಹಾಗೂ ಗೆಳೆಯ ಸಹಾಯ ಮಾಡುತ್ತಿರುತ್ತಾರೆ. ಕಮಲಿ ನಾಪತ್ತೆಯಾಗಿದ್ದು, ಅಂಬಿ, ನೋಡಲು ಥೇಟ್ ಕಮಲಿ ರೀತಿಯೇ ಇರುವುದರಿಂದ ಅಂಬಿಯನ್ನೇ ಕಮಲಿಯನ್ನಾಗಿ ನಟಿಸುವಂತೆ ಅನಿಕಾ ಹಾಗೂ ಕಾಮಿನಿ ರೆಡಿ ಮಾಡುತ್ತಿದ್ದಾರೆ. ಈಗಾಗಲೇ ಮಹಾಜನ್ ಮನೆಗೆ ಅಂಬಿ ಎಂಟ್ರಿ ಕೊಟ್ಟಿದ್ದಾಗಿದೆ. ಮನೆಯವರೆಲ್ಲಾ ಅಂಬಿಯನ್ನು ನೋಡಿ ಶಾಕ್ ಆಗಿದ್ದು ಮಾತ್ರವಲ್ಲದೆ ಕನ್ಫ್ಯೂಸ್ ಆಗಿದ್ದಾರೆ. ಅಂಬಿ ಅಣ್ಣ ಅಮರ್ ಜೈಲಿನಿಂದ ಬಿಡುಗಡೆಯಾಗಿ ಬರುತ್ತಾನೆ. ಅಮರ್ ಪಾತ್ರದಲ್ಲಿ ರಾಣವ್. ಆರ್ ಗೌಡ ನಟಿಸುತ್ತಿದ್ದಾರೆ.
ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ನಿರ್ಧಾರ ಮಾಡಿದ್ದ ರಾಣವ್, ಪ್ರವರ ಎಂಬ ನಾಟಕ ತಂಡ ಸೇರಿದರು. ಅಲ್ಲಿ ಆ್ಯಕ್ಟಿಂಗ್ನಲ್ಲಿ ಪಳಗಿದ ರಾಣವ್, ಕುದುರೆ ಬಂತು ಕುದುರೆ, ಜ್ಯುಪಿಟರ್, ಜೊತೆಗಿರುವನು ಚಂದಿರ ಹೀಗೆ ಒಂದಷ್ಟು ನಾಟಕಗಳಲ್ಲಿ ನಟಿಸಿದ್ದರು. ನಂತರ ಬೆಳ್ಳಿತೆರೆಗೆ ಹಾರಿದ ರಾಣವ್ ಸಣ್ಣ ಪುಟ್ಟ ಪಾತ್ರಗಳಿಗೆ ಜೀವ ತುಂಬಿದರು. ಶ್ರೀಕಂಠ, ಮತ್ತೆ ಬಾ ಉಪೇಂದ್ರ, ವಿರಾಟ್ ಸಿನಿಮಾಗಳಲ್ಲಿ ನಟಿಸಿರುವ ರಾಣವ್, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೀವನದಿ ಧಾರಾವಾಹಿಯಲ್ಲಿ ಖಳನಾಯಕನ ಮಗನ ಸ್ನೇಹಿತ ಆಗಿ ನಟಿಸಿದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ , ಕೃಷ್ಣ ತುಳಸಿ ಧಾರಾವಾಹಿಯಲ್ಲಿ ಕೂಡಾ ರಾಣವ್, ಖಳನಾಯಕರಾಗಿ ಅಭಿನಯಿಸಿದ್ದಾರೆ. ವರಲಕ್ಷ್ಮಿ ಸ್ಟೋರ್ಸ್ ನಂತರ ಮತ್ತೆ ವಸಂತ, ಇದೀಗ ಕಮಲಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.