ETV Bharat / sitara

Bigg Boss Season 8: ಗೆಲುವನ್ನು ಮಜಾಭಾರತ ಟೀಂಗೆ ಅರ್ಪಿಸಿದ ಮಂಜು ಪಾವಗಡ - ಬಿಗ್ ಬಾಸ್ ಮಂಜು ಪಾವಗಡ

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಮಜಾಭಾರತ ಶೋನಿಂದಲೇ ಪ್ರಸಿದ್ದಿ ಪಡೆದ ಮಂಜು ಪಾವಗಡ ತನ್ನ ಗೆಲುವನ್ನು ಮಜಾಭಾರತ ತಂಡಕ್ಕೆ ಅರ್ಪಿಸಿದ್ದಾರೆ.

Bigg Boss winner Manju Pavagada
ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆದ ಮಂಜು ಪಾವಗಡ
author img

By

Published : Aug 9, 2021, 6:56 AM IST

Updated : Aug 9, 2021, 9:04 AM IST

'ಈ ಗೆಲುವನ್ನು ಮಜಾಭಾರತ ತಂಡಕ್ಕೆ ಅರ್ಪಿಸುತ್ತೇನೆ. ನನ್ನ ಮಜಾಭಾರತಕ್ಕೆ ಧನ್ಯವಾದಗಳು' ಎಂದು ಬಿಗ್​ಬಾಸ್ ಸೀಸನ್ 8 ರ ವಿನ್ನರ್ ಮಂಜು ಪಾವಗಡ ಹೇಳಿದರು.

'ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ, ತುಂಬಾ ಖುಷಿಯಾಗುತ್ತಿದೆ, ಮಾತುಗಳೇ ಬರುತ್ತಿಲ್ಲ. ಇಷ್ಟು ಮತಗಳನ್ನು ನೀಡಿದ ಎಲ್ಲಾ‌ ವೀಕ್ಷಕರಿಗೆ ಧನ್ಯವಾದಗಳು' ಎಂದು ಮಂಜು ಭಾವುಕರಾದರು.

ಗೆಲುವನ್ನು ಮಜಾಭಾರತ ಟೀಂಗೆ ಅರ್ಪಿಸಿದ ಮಂಜು ಪಾವಗಡ

'ನಾನು ಬಿಗ್ ಬಾಸ್ ಮನೆಗೆ ಬರುವ ಮೊದಲು ಮಜಾಭಾರತ ನಿರ್ದೇಶಕರು, 'ನೀನು ಸುದೀಪ್ ಅವರ ಕೈ ಹಿಡಿದು ನಿಂತಿರುತ್ತಿಯಾ' ಎಂದು ಹೇಳಿದ್ದರು. ಅವರು ಹೇಳಿದ ಹಾಗೆಯೇ, ನಾನು ಗೆದ್ದಿದ್ದೇನೆ. ಈ ವೇದಿಕೆ‌ ಮೇಲೆ‌ ನಿಂತಿರುವುದಕ್ಕೆ ಮತ್ತು ಇಷ್ಟು ದಿನ ಮನೆಯಲ್ಲಿರಲು ಎಲ್ಲದಕ್ಕೂ ನನಗೆ ಸ್ಫೂರ್ತಿ ಅರವಿಂದ್' ಎಂದರು.

'ನಾನು ಕೇವಲ ಮನರಂಜನೆ ನೀಡುತ್ತೇನೆ. ಆದರೆ, ಟಾಸ್ಕ್ ನನಗೆ ಹೊಸದು. ಆ ಟಾಸ್ಕ್ ಮೂಲಕ ಅರವಿಂದ್ ನನ್ನನ್ನು ಮತ್ತಷ್ಟು ಸ್ಫೂರ್ತಿಗೊಳಿಸಿದರು' ಎಂದು ಮಂಜು ಮನಬಿಚ್ಚಿ ಮಾತನಾಡಿದರು.

ಇದನ್ನೂ ಓದಿ: ಮಜಾಭಾರತ ಖ್ಯಾತಿಯ ಮಂಜು ಪಾವಗಡ ಮುಡಿಗೆ ಬಿಗ್​ ಬಾಸ್​ ಕಿರೀಟ.. ಅರವಿಂದ್‌ ರನ್ನರ್‌ ಅಪ್‌..

ಬಿಗ್​ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ ಮಂಜು ಪಾವಗಡ, ಟ್ರೋಫಿಸಹಿತ 53 ಲಕ್ಷ ರೂಪಾಯಿ ಬಹುಮಾನ ‌ಪಡೆದುಕೊಂಡರು.

Last Updated : Aug 9, 2021, 9:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.