ETV Bharat / sitara

Bigg Boss: 'ಆಲ್​ ದಿ ಬೆಸ್ಟ್' ಎಂದು ಶಿವಣ್ಣ ವಿಶ್​... ಕೊನೆಗೂ ಈಡೇರಿತು ಮಂಜು ಆಸೆ! - ಮಂಜು ಪಾವಗಡ ಶಿವರಾಜ್​ಕುಮಾರ್​ ಹಾರೈಕೆ

ಬಿಗ್​ಬಾಸ್ ಕೊನೆಯ ರಿಯಾಲಿಟಿ ಎಪಿಸೋಡ್​​ನಲ್ಲಿ ದಿವ್ಯ ಉರುಡುಗ ಅವರ ಫೋಟೋ ವಾಲ್ ಹಾಗೂ ಮಂಜು ಪಾವಗಡ ಅವರ ಈಡೇರದ ಆಸೆ ಈಡೇರಿದೆ.

manju-paavagadas-desire-fulfilled-the-end
Bigg Boss: 'ಆಲ್​ ದಿ ಬೆಸ್ಟ್' ಎಂದು ಶಿವಣ್ಣ ವಿಶ್​... ಕೊನೆಗೂ ಈಡೇರಿತು ಮಂಜು ಆಸೆ!
author img

By

Published : Aug 7, 2021, 2:17 AM IST

ಬಿಗ್​ಬಾಸ್ ಸೀಸನ್ 8ರ ಕೊನೆಯ ರಿಯಾಲಿಟಿ ಎಪಿಸೋಡ್ ಶುಕ್ರವಾರ ​​ಮುಕ್ತಾಯವಾಗಿದೆ. ಇಂದು (ಶನಿವಾರ) ಹಾಗೂ ನಾಳೆ ಸಂಜೆ ಆರು ಗಂಟೆಗೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಅರವಿಂದ್ ಕೆ.ಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಫಿನಾಲೆ ವಾರದ ತನಕ ತಮ್ಮ ವೈಯಕ್ತಿಕ ಆಟ ಆಡುವ ಮೂಲಕ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಕೊನೆಯ ರಿಯಾಲಿಟಿ ಎಪಿಸೋಡ್​​ನಲ್ಲಿ ದಿವ್ಯ ಉರುಡುಗ ಅವರ ಫೋಟೋ ವಾಲ್ ಹಾಗೂ ಮಂಜು ಪಾವಗಡ ಅವರ ಈಡೇರದ ಆಸೆ ಈಡೇರಿದೆ.

ಮಂಜು ಪಾವಗಡ ಶಿವರಾಜ್​ಕುಮಾರ್​ ಅವರ ಶುಭ ಹಾರೈಕೆ​ ಬೇಕು ಎಂದು ಕೋರಿದ್ದರು. 'ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ದಯವಿಟ್ಟು ನೆರವೇರಿಸಿ' ಎಂದು ಮಂಜು ಕಿವಿಯ ಆಕೃತಿ ಬಳಿ ಕೋರಿದ್ದರು.

ಸುಮಾರು ಐದಾರು ದಿನಗಳಿಂದ ಇದಕ್ಕಾಗಿ ಕಾಯುತ್ತಿದ್ದ ಮಂಜು ಅವರ ಆಸೆ ಕೊನೆಗೂ ಈಡೇರಿದೆ. ನಟ ಶಿವರಾಜ್ ಕುಮಾರ್, 'ಹಾಯ್​ ಮಂಜು, ಬಿಗ್​ಬಾಸ್​ ಫಿನಾಲೆಗೆ ಬಂದಿದ್ದೀರಿ. ಇದನ್ನು ಕೇಳಿ ತುಂಬಾನೇ ಖುಷಿ ಆಯ್ತು. ಗೆದ್ದು ಬನ್ನಿ, ಎಲ್ಲರಿಗೂ ಒಳ್ಳೆಯದಾಗಲಿ. ಮಂಜು ನಿಮಗೆ ಮತ್ತೊಮ್ಮೆ ಆಲ್​ ದಿ ಬೆಸ್ಟ್​​. ಲವ್​​ ಯು' ಎಂದು ವಿಶ್​​​ ಮಾಡಿದ್ದಾರೆ.

ಇದರಿಂದ ಸಂತಸಗೊಂಡ ಮಂಜು, ಇದು ನನ್ನ ಜೀವನದ ಮುಖ್ಯವಾದ ದಿನ, ಇದಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಮನೆಯ ಸದಸ್ಯರೊಂದಿಗೆ ಹೇಳಿಕೊಂಡರು. ಹಾಗೆಯೇ ಶಿವಣ್ಣ ಅವರಿಗೆ ಧನ್ಯವಾದ ಕೂಡ ತಿಳಿಸಿದರು.

ಇದನ್ನೂ ಓದಿ: ಫಿನಾಲೆಗೂ ಮುನ್ನವೇ ಎರಡು ಲಕ್ಷ ರೂ. ನಗದು ಗೆದ್ದ ಅರವಿಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.