ಧಾರಾವಾಹಿ ಮುಗಿದಿದ್ದರೂ ಸಹ ಅಭಿಮಾನಿಗಳು ಅವರನ್ನು ತುಂಬಾ ಮಿಸ್ ಮಾಡುತ್ತಿತ್ತು. ಅದರಲ್ಲೂ ಚಂದನ್ ಪಾತ್ರಧಾರಿ ಚಂದುಗೌಡ ಅಂತೂ ಹುಡುಗಿಯರ ಹಾಟ್ ಫೇವರಿಟ್ ಆಗಿ ಬಿಟ್ಟಿದ್ದರು.
ನೂರಾರು ಹುಡುಗಿಯರ ಹಾಟ್ ಫೇವರಿಟ್ ಆಗಿದ್ದ ಚಂದು ಗೌಡ ಅವರ ಹಾರ್ಟ್ ಅನ್ನು ಚೆಂದುಳ್ಳಿ ಚೆಲುವೆ ಕದ್ದು ಬಿಟ್ಟಿದ್ದಾರೆ. ಹೌದು, ಲಕ್ಷ್ಮಿ ಬಾರಮ್ಮ ಚಂದನ್ ಇದೀಗ ರಿಯಲ್ ಆಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಚಂದು ಅವರ ಹೃದಯ ಕದ್ದ ಹುಡುಗಿಯ ಹೆಸರು ಶಾಲಿನಿ. ಚಂದು ಗೌಡ ಕಳೆದ ಮೂರು ವರುಷಗಳಿಂದ ಶಾಲನಿಯನ್ನು ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪೂಜೆಯಲ್ಲಿ ಇವರಿಬ್ಬರೂ ಮಿಂಚಿದ್ದು, ಮೊದಲ ಬಾರಿಗೆ ತಮ್ಮ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ಇನ್ನೂ ಈ ಜೋಡಿ ಇದೇ ವರ್ಷ ಮೇ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದಿನಾಂಕ ನಿಗದಿಯಾಗಬೇಕಷ್ಟೇ ಎಂದು ಹೇಳುವ ಚಂದುಗೌಡ ಸದ್ಯ ಬೆಳ್ಳಿತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.