ಬಿಗ್ ಬಾಸ್ ಕನ್ನಡ ಸೀಸನ್ 7 ಕೊನೆಯ ಹಂತಕ್ಕೆ ತಲುಪಿದೆ. 113 ದಿನಗಳ ಕಾಲ ನಡೆದ ಬಿಗ್ ಬಾಸ್ ಕಾರ್ಯಕ್ರಮ ನಾಳೆ ಅಂತಿಮ ಘಟ್ಟ ತಲುಪಲಿದೆ. ಹರೀಶ್ ರಾಜ್ ಮೊನ್ನೆ ನಡೆದ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರ ಬಂದಿದ್ದರು. ಇದೀಗ ಕುರಿ ಪ್ರತಾಪ್, ವಾಸುಕಿ ವೈಭವ್, ಶೈನ್ ಶೆಟ್ಟಿ, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ದೊಡ್ಮನೆಯಲ್ಲಿದ್ದು ಬಿಗ್ ಬಾಸ್ ವಿನ್ನರ್ ಪಟ್ಟ ಯಾರ ಮುಡಿ ಸೇರುತ್ತದೆ ಎಂಬ ಕಾತರ ವೀಕ್ಷಕರಿಗಿದೆ.
- " class="align-text-top noRightClick twitterSection" data="
">
ಎಲ್ಲರೂ ತಮ್ಮ ನೆಚ್ಚಿನ ಸ್ಫರ್ಧಿಗಳಿಗೆ ವೋಟ್ ಮಾಡುತ್ತಿದ್ದಾರೆ. ಇವರೇ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ. ಇದೀಗ ಮಜಾ ಟಾಕೀಸ್ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಕುರಿ ಪ್ರತಾಪ್ ಈ ಸೀಸನ್ನ ವಿಜೇತರಾಗಲಿ ಎಂದು ಶುಭ ಹಾರೈಸಿದ್ದಾರೆ. ಮಾತ್ರವಲ್ಲ, ವೀಕ್ಷಕರು ಕೂಡಾ ಕುರಿ ಪ್ರತಾಪ್ ಅವರಿಗೆ ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ.