ಕಿರುತೆರೆಯ ರಾಧಿಕಾ ಪಂಡಿತ್ ಎಂದೇ ಜನಪ್ರಿಯವಾಗಿರುವ ಕಾವ್ಯಗೌಡ ಅವರನ್ನು ಮರೆಯಲು ಸಾಧ್ಯವೇ..? ಕಾವ್ಯಗೌಡ , 'ರಾಧಾ ರಮಣ' ಧಾರಾವಾಹಿಯ ಆರಾಧನಾ ಆಗಿ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವುದಂತೂ ನಿಜ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಲಿಯಾಸ್ ರಾಧಾ ಆಗಿ ಶ್ವೇತಾ ಪ್ರಸಾದ್ ನಟಿಸುತ್ತಿದ್ದರು. ತದ ನಂತರ ಕಾರಣಾಂತರದಿಂದ ಶ್ವೇತಾ ಅವರು ಪಾತ್ರಕ್ಕೆ ವಿದಾಯ ಹೇಳಿದಾಗ ಅವರ ಜಾಗಕ್ಕೆ ಬಂದದ್ದೇ ಈ ಹೊಸ ರಾಧಾ ಮಿಸ್. ಧಾರಾವಾಹಿ ಮುಗಿದ ಬಳಿಕ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಕಾವ್ಯ ಇದೀಗ ಇಂಡೋನೇಶ್ಯಾದ ಬಾಲಿಯಲ್ಲಿ ಮಜಾ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಷೇರ್ ಮಾಡಿರುವ ಅವರು 'ಸಂತೋಷದ ಪ್ರಪಂಚ ಇದೀಗ ಆರಂಭವಾಗಿದೆ' ಎಂದು ಬರೆದುಕೊಂಡಿದ್ದಾರೆ. ತಮ್ಮ ಗೆಳತಿಯರೊಂದಿಗೆ ಈ ಚೆಲುವೆ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ವಿಶೇಷ ಉಡುಪುಗಳಿಂದ ಕಾವ್ಯ ಹಾಗೂ ಸ್ನೇಹಿತೆಯರು ಗಮನ ಸೆಳೆಯುತ್ತಿದ್ದಾರೆ. 'ರಾಧಾ ರಮಣ' ಧಾರಾವಾಹಿ ಮುಗಿದ ನಂತರ ಕಾವ್ಯ ಬೇರೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಮತ್ತ್ಯಾವ ಧಾರಾವಾಹಿಯಲ್ಲಿ ಅವರು ಅಭಿನಯಿಸಲಿದ್ದಾರೆ ಕಾದು ನೋಡಬೇಕು.
- " class="align-text-top noRightClick twitterSection" data="
">
- " class="align-text-top noRightClick twitterSection" data="
">