ETV Bharat / sitara

ಮತ್ತೆ ಕಿರುತೆರೆಯಲ್ಲಿ ಪ್ರಿಯಾಂಕಾ.. 'ಕಥೆಯ ರಾಜಕುಮಾರಿ' ಧಾರಾವಾಹಿಗೆ 'ಅಗ್ನಿಸಾಕ್ಷಿ'ಯ ವಿಲನ್ ಎಂಟ್ರಿ!! - ಸ್ಟಾರ್ ಸುವರ್ಣ

ಒಂದು ಬಾರಿಯಾದರೂ ತೆರೆ ಮೇಲೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಬೇಕೆಂಬ ಆಸೆಯಿದೆ ಎನ್ನುವ ಪ್ರಿಯಾಂಕಾ ಬಿಗ್‌ಬಾಸ್ ಸೀಸನ್-7 ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು. ಮಾತ್ರವಲ್ಲ ಆ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವೂ ಆದರು..

katheya-rajakumari-serial-will-broadcast-soon
ಪ್ರಿಯಾಂಕಾ ಶಿವಣ್ಣ
author img

By

Published : Jul 11, 2020, 7:59 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಚಂದ್ರಿಕಾ ಆಗಿ ಮನೆ ಮಾತಾಗಿರುವ ಪ್ರಿಯಾಂಕಾ ಶಿವಣ್ಣ ಇದೀಗ ಮತ್ತೆ ಕಿರುತೆರೆಗೆ ಮರಳಿ ಬರುತ್ತಿದ್ದು, ವಿಲನ್ ರೋಲ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.

katheya-rajakumari-serial-will-broadcast-soon
ಪ್ರಿಯಾಂಕಾ ಶಿವಣ್ಣ
ಅಂದ ಹಾಗೇ ತೆಲುಗಿನ 'ಕಥಲೋ ರಾಜಕುಮಾರಿ' ಧಾರಾವಾಹಿಯು ಕನ್ನಡಕ್ಕೆ ಡಬ್ ಆಗುತ್ತಿದ್ದು 'ಕಥೆಯ ರಾಜಕುಮಾರಿ' ಹೆಸರಿನಲ್ಲಿ, ಇದೇ ಜುಲೈ 13ರಿಂದ ಮಧ್ಯಾಹ್ನ 1.30ಕ್ಕೆ ಸ್ಟಾರ್ ಸುವರ್ಣ ವಾಹಿನಿ ಪ್ರಸಾರ ಆರಂಭಿಸಲಿದೆ. ಕಥಲೋ ರಾಜಕುಮಾರಿಯ ಮೂಲಕ ತೆಲುಗು ಕಿರುತೆರೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಿದ್ದ ಪ್ರಿಯಾಂಕಾ ಇದೀಗ ಅದೇ ಧಾರಾವಾಹಿಯ ಕನ್ನಡ ಅವತರಣಿಕೆಯ ಮೂಲಕ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಬರಲಿದ್ದಾರೆ.

ಕಥೆಯ ರಾಜಕುಮಾರಿ ಧಾರಾವಾಹಿಯಲ್ಲಿ ಪ್ರಿಯಾಂಕಾ
'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಪ್ರಿಯಾಂಕಾ 'ಒಂದೂರಲ್ಲಿ ರಾಜರಾಣಿ' ಸೀರಿಯಲ್‌ನಲ್ಲಿಯೂ ಬಣ್ಣ ಹಚ್ಚಿದರು. ತದ ನಂತರ ಅಗ್ನಿಸಾಕ್ಷಿ ಚಂದ್ರಿಕಾ ಪಾತ್ರಕ್ಕೆ ಜೀವ ತುಂಬಿದ ಪ್ರಿಯಾಂಕಾ ಇಂದಿಗೂ ಚಂದ್ರಿಕಾ ಎಂದೇ ಫೇಮಸ್ಸು! ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿಯೂ ಬಿಟ್ಟರು.

ಮತ್ತೇ ವಿಲನ್​ ಆಗಿ ಕಿರುತೆರೆಗೆ ಪ್ರಿಯಾಂಕ್​ ಎಂಟ್ರೀ
ಕಲರ್ಸ್ ಕನ್ನಡ ಅನುಬಂಧ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಗೆದ್ದ ಪ್ರಿಯಾಂಕಾಗೆ ನೆಗೆಟಿವ್ ಶೇಡ್ ಇರುವ ಪಾತ್ರಗಳನ್ನು ಮಾಡಲು ತುಂಬಾ ಇಷ್ಟ. ಅದರ ಹೊರತಾಗಿ ಅಳುವ ಪಾತ್ರಗಳೆಂದರೆ ಅಷ್ಟಕಷ್ಟೇ! ಒಂದು ಬಾರಿಯಾದರೂ ತೆರೆ ಮೇಲೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಬೇಕೆಂಬ ಆಸೆಯಿದೆ ಎನ್ನುವ ಪ್ರಿಯಾಂಕಾ ಬಿಗ್‌ಬಾಸ್ ಸೀಸನ್-7 ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು. ಮಾತ್ರವಲ್ಲ ಆ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವೂ ಆದರು.

ಖಡಕ್​ ನೋಟದ ಚಂದ್ರಿಕಾ
ಇಂತಿಪ್ಪ ಪ್ರಿಯಾಂಕಾ ಬಿಗ್‌ಬಾಸ್ ಮನೆಗೆ ತೆರಳಿ ಮನಗೆದ್ದಿದ್ದರು. ಈಗ ಕಥೆಯ ರಾಜಕುಮಾರಿ ಸೀರಿಯಲ್ ಮೂಲಕ ಮತ್ತೊಮ್ಮೆ ನಮ್ಮನ್ನು ರಂಜಿಸಲು ಬರುತ್ತಿದ್ದಾರೆ. ತೆಲುಗಿನ 'ಕಥಲೋ ರಾಜಕುಮಾರಿ'ಯ ಡಬ್ ಆಗಿರುವ ಈ ಸೀರಿಯಲ್‌ನಲ್ಲಿ ಪ್ರಿಯಾಂಕ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಚಂದ್ರಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.