ETV Bharat / sitara

ಯಶಸ್ವಿ 200 ಸಂಚಿಕೆ ಪೂರೈಸಿದ 'ಕನ್ನಡತಿ' ಧಾರಾವಾಹಿ - Kannadati serial 200 edisode

ಅತ್ಯಂತ ಯಶಸ್ವಿ ಧಾರವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ತನ್ನ 200ನೇ ಸಂಚಿಕೆಯನ್ನು ಪೂರೈಸಿದೆ. ಪ್ರತಿ ಸಂಚಿಕೆಯೂ ಟ್ವಿಸ್ಟ್​​ಗಳು ಕುತೂಹಲ ಮೂಡಿಸುತ್ತಿದ್ದು, ಇತರ ಧಾರಾವಾಹಿಗಳಿಗಿಂತ ವಿಭಿನ್ನವಾಗಿದೆ ಎಂಬ ಮಾತುಗಳನ್ನು ವೀಕ್ಷಕರು ಹೇಳುತ್ತಿದ್ದಾರೆ.

Kannadati serial succuesfully completed 200 edisode
ಯಶಸ್ವಿ 200 ಸಂಚಿಕೆ ಪೂರೈಸಿದ 'ಕನ್ನಡತಿ' ಧಾರಾವಾಹಿ
author img

By

Published : Nov 23, 2020, 7:00 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯು ತನ್ನ ವಿಭಿನ್ನ ಕಥಾಹಂದರದಿಂದ ವೀಕ್ಷಕರ ಮನಗೆದ್ದಿದೆ ಎಂಬುದಕ್ಕೆ ಎರಡು ಮಾತಿಲ್ಲ. ಇಷ್ಟು ದಿನ ಧಾರಾವಾಹಿ ನೋಡದವರು, ಅಯ್ಯೋ ಧಾರಾವಾಹಿಯ ಎಂದು ಮೂಗು ಮರಿಯುವವರೂ ಇಂದು ಕನ್ನಡತಿಯನ್ನು ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಧಾರಾವಾಹಿಯ ಬಗ್ಗೆ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿವೆ. ಧಾರಾವಾಹಿಯು ಇದೀಗ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ.

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಿದ್ದ ರಂಜನಿ ರಾಘವನ್ ಇಲ್ಲಿ ಕನ್ನಡ ಉಪನ್ಯಾಸಕಿ ಭುವನೇಶ್ವರಿ ಆಗಿ ಅಭಿನಯಿಸುತ್ತಿದ್ದಾರೆ. ಗೌರಿ ಪಾತ್ರಕ್ಕೂ ಭುವಿ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಅರಳು ಹುರಿದಂತೆ ಪಟಪಟನೆ ಸ್ಪಷ್ಟವಾಗಿ ಕನ್ನಡ ಮಾತನಾಡುವ ಭುವಿ ತನ್ನ ಮಾತಿನ ಮೂಲಕ ಮಾತ್ರವಲ್ಲದೇ ಅಭಿನಯದ ಮೂಲಕವೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.

Kannadati serial succuesfully completed 200 edisode
ಕನ್ನಡತಿ ಧಾರವಾಹಿಯ ಕಲಾವಿದರು

ಮಧ್ಯಮ ವರ್ಗದ ಹುಡುಗಿಯಾಗಿರುವ ಭುವನೇಶ್ವರಿ ಎದುರಾಗುವಂತಹ ಪರಿಸ್ಥಿತಿಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಶೈಲಿ ವೀಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ, ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಕೂಡಾ ಕನ್ನಡತಿಯ ಮೂಲಕ ಮನೆ ಮಾತಾಗಿದ್ದಾರೆ. ಈ ಹಿಂದೆ ಅವರು ಕಿನ್ನರಿ ಧಾರಾವಾಹಿಯ ನಕುಲ್ ಆಗಿ ಅಭಿನಯಿಸಿದ್ದರೂ, ಕನ್ನಡತಿಯ ಹರ್ಷಗೆ ದೊರೆತ ಜನಪ್ರಿಯತೆ ಕಿನ್ನರಿಯಲ್ಲಿ ದೊರೆತಿಲ್ಲ.

ಉಳಿದಂತೆ ಕನ್ನಡತಿ ಎಲ್ಲಾ ಪಾತ್ರಗಳು ಅಷ್ಟೇ ತೂಕದಿಂದ ಕೂಡಿದ್ದು ಧಾರಾವಾಹಿಯಲ್ಲಿ ಉಳಿದ ಪಾತ್ರಗಳಿಗೆ ಮಹತ್ವ ನೀಡಲಾಗಿದೆ‌. ಪ್ರತಿ ಸಂಚಿಕೆಯ ಟ್ವಿಸ್ಟ್​​ಗಳು ಕುತೂಹಲ ಮೂಡಿಸುತ್ತಿದ್ದು, ಇತರ ಧಾರಾವಾಹಿಗಳಿಗಿಂತ ವಿಭಿನ್ನವಾಗಿರುವುದಂತೂ ನಿಜ ಎಂಬುದು ವೀಕ್ಷಕರ ಮಾತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.