ಕೇರಳದಲ್ಲಿ ಗರ್ಭಿಣಿ ಆನೆಯೊಂದಕ್ಕೆ ಸ್ಫೋಟಕ ತುಂಬಿದ ಹಣ್ಣು ನೀಡಿ ಕೊಂದ ವಿಚಾರ ನಿನ್ನೆಯಿಂದ ಸಾಕಷ್ಟು ಸುದ್ದಿಯಾಗುತ್ತಿದೆ. ಪಾಪಿಗಳು ಮಾಡಿದ ಈ ಹೀನಾಯ ಕೃತ್ಯಕ್ಕೆ ಚಿತ್ರರಂಗ ಕೂಡಾ ದು:ಖ ವ್ಯಕ್ತಪಡಿಸಿದೆ. ಇದೀಗ ಕನ್ನಡ ಕಿರುತೆರೆ ಕಲಾವಿದರು ಕೂಡಾ ಆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ.
- View this post on Instagram
ಈ ಫೋಟೋ ನೋಡಿದಾಗಲೆಲ್ಲಾ ಕರುಳು ಹಿಂಡುತ್ತಿದೆ.... ಮನುಷ್ಯನೇಕೆ ರಾಕ್ಷಸನಾಗುತ್ತಿದ್ದಾನೆ.....?
">
'ಈ ಕೃತ್ಯವನ್ನು ನೋಡಿದ ಬಳಿಕ ನನಗೆ ನಿಜವಾಗಿಯೂ ಪ್ರಾಣಿಗಳಿಂತ ಮನುಷ್ಯನೇ ತುಂಬಾ ಡೇಂಜರಸ್ ಎಂದೆನಿಸುತ್ತಿದೆ. ಮತ್ತೊಮ್ಮೆ ಮನುಷ್ಯತ್ವ ಸೋತಿದೆ. ನಿಜಕ್ಕೂ ತುಂಬಾ ಬೇಸರದ ಸಂಗತಿ. ಮಾತ್ರವಲ್ಲ ಇದು ಮಾನವ ಜನ್ಮಕ್ಕೆ ಅವಮಾನ ತಂದ ಪ್ರಕರಣ' ಎಂದು ಮಜಾ ಟಾಕೀಸ್ನ ರಾಣಿ ಖ್ಯಾತಿಯ ಶ್ವೇತಾ ಚೆಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ ಮಾಜಿ ಸ್ಪರ್ಧಿ, ನಿರೂಪಕ ಕಿರಿಕ್ ಕೀರ್ತಿ ಕೂಡಾ ಈ ಘಟನೆಗೆ ಸಂಬಂಧಿಸಿದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದು ಮಾನವನ ಈ ಹೀನಾಯ ಕೃತ್ಯವನ್ನು ಖಂಡಿಸಿದ್ದಾರೆ.
- " class="align-text-top noRightClick twitterSection" data="
">
ಇನ್ನು ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ ದೀಪಿಕಾ ದಾಸ್ ಕೂಡಾ ಮನುಷ್ಯರ ಈ ವರ್ತನೆಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಪ್ರಾಣಿಪ್ರಿಯೆ ಆಗಿರುವ ಅವರು ದುರಂತದಲ್ಲಿ ಸಾವನ್ನಪ್ಪಿದ ಆನೆ ಬಗ್ಗೆ ಕಂಬನಿ ಮಿಡಿದಿದ್ದಾರೆ. ಬಿಗ್ಬಾಸ್ ಮತ್ತೊಬ್ಬ ಮಾಜಿ ಸ್ಪರ್ಧಿ ಸುಜಾತಾ ಅಕ್ಷಯ ಕೂಡಾ ಪ್ರತಿಕ್ರಿಯಿಸಿ 'ಈ ಕೆಲಸ ಮಾಡಿರುವ ಪಾಪಿಗಳನ್ನು ಶೂಟ್ ಮಾಡಬೇಕು ಅಥವಾ ನೇಣಿಗೆ ಹಾಕಬೇಕು' ಎಂದು ಬರೆದುಕೊಂಡಿದ್ದಾರೆ. 'ಮನುಷ್ಯರಿಗೆ ಮನುಷ್ಯತ್ವ ಇಲ್ಲ ಎಂಬುದರ ಅರಿವು ಆಕೆಗೆ ಇರಲಿಲ್ಲ, ತನ್ನ ಗರ್ಭದಲ್ಲಿರುವ ಕಂದನನ್ನು ಉಳಿಸಲು, ಅದರ ಹಸಿವು ನೀಗಿಸಲು ಆಕೆ ಅವರನ್ನು ನಂಬಿದ್ದಳು' ಎಂದು ಆಶಿತ ಚಂದ್ರಪ್ಪ ಬರೆದಿದ್ದಾರೆ.
- " class="align-text-top noRightClick twitterSection" data="
">
ಒಟ್ಟಿನಲ್ಲಿ ಮೂಕಜೀವಿ ಎಂಬುದನ್ನೂ ನೋಡದೆ ಎರಡು ಜೀವಗಳನ್ನು ಕೊಂದ ಪಾಪಿಗಳು ನಿಜಕ್ಕೂ ಶಿಕ್ಷೆ ಅನುಭವಿಸಲೇಬೇಕು ಎಂದು ಎಲ್ಲರೂ ಶಾಪ ಹಾಕುತ್ತಿದ್ದಾರೆ.