ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಜನಮನ ಸೂರೆಗೊಂಡಿರುವ ನಟಿ ತಾರಾ ಅವರು ‘ಸಾವಿತ್ರಿ‘ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿಂಪಲ್ ಆಗಿ ಸೆಟ್ಟೇರಿದ ಸಾವಿತ್ರಿ ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದೆ. ಈ ಹಿನ್ನೆಲೆ ಚಿತ್ರತಂಡದವರು ಕುಂಬಳಕಾಯಿ ಒಡೆದು 'ಸಾವಿತ್ರಿ'ಗೆ ಶುಭ ಕೋರಿದ್ದಾರೆ.

45 ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಪ್ರಸ್ತುತ ಸಂಕಲನ ಕಾರ್ಯ ಬಿರುಸಿನಿಂದ ಸಾಗಿದೆ. ತಾರಾ ಅನುರಾಧ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ನಾಯಕರಾಗಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಊರ್ವಶಿ ರೈ ಈ ಚಿತ್ರದ ನಾಯಕಿಯಾಗಿದ್ದು, ಪ್ರಕಾಶ್ ಬೆಳವಾಡಿ, ಸಂಜು, ಬಸಯ್ಯ, ಬೇಬಿ ನೈಲಾ ಪ್ರಮೋದ್, ಸ್ವಾತಿ, ಮಾಸ್ಟರ್ ಪುನೀತ್, ಮಾನ್ವಿಕ್, ಚಿನ್ಮಯ್, ಬೇಬಿ ಸಂಜನಾ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಎಸ್ ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಸಾಹಿತಿ ಹೃದಯ ಶಿವ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಗೀತರಚನೆ ಹಾಗೂ ಸಂಭಾಷಣೆ ಕೂಡ ಅವರದ್ದೆ. ಇಷ್ಟು ದಿನ ಗೀತರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗಾರ್ಜುನ ಡಿ ಛಾಯಾಗ್ರಹಣ ಹಾಗೂ ಮನು ಅವರು ಸಂಕಲನ ಮಾಡುತ್ತಿದ್ದು, ಚಿತ್ರವನ್ನು ಪಿ.ಎನ್.ಪಿ ಪ್ರೊಡೆಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಾಣ ಮಾಡಿದ್ದಾರೆ.