ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿರುವ 'ರಾಬರ್ಟ್' ಚಿತ್ರ ತಂಡದಿಂದ ಹೊಸ ಸುದ್ದಿಯೊಂದು ರಿವೀಲ್ ಆಗಿದೆ.
ಹೌದು, ಮುಂದಿನ ತಿಂಗಳ ಮಾರ್ಚ್ 11ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ರಾಬರ್ಟ್ ಸಿನಿಮಾವನ್ನು ತೆಲುಗಿನಲ್ಲಿ ಸಹ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಗಣರಾಜ್ಯೋತ್ಸವದಂದು 'ರಾಬರ್ಟ್' ತೆಲುಗು ಹೊಸ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಎರಡು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವಂತೆ ಘೋಷಿಸಿದ ನಿರ್ದೇಶಕ ತರುಣ್ ಕಿಶೋರ್ ಸುಧೀರ್, ಮುಂದಿನ ದಿನಗಳಲ್ಲಿ ತೆಲುಗಿನ ಟೀಸರ್ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದಾಕ್ಷಣ ಎರಡೂ ಭಾಷೆಗಳ ಸಿನಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಇನ್ನು ನಟ ದರ್ಶನ್ಗೆ ಆಶಾ ಭಟ್ ನಾಯಕಿಯಾಗಿದ್ದು, ಐಶ್ವರ್ಯ ಪ್ರಸಾದ್ ಮತ್ತು ಸೋನಾಲ್ ಮಾಂಟೆರೊ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸುಧಾಕರ್ ಎಸ್. ರಾಜ್ ಅವರ ಕ್ಯಾಮರಾ ಕೆಲಸ ಇದೆ. ಜೊತೆಗೆ ಉಮಾಪತಿ ಎಸ್. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.