ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಬಿಗ್ಬಾಸ್ ಸೀಸನ್ 8 ಇದೀಗ ಮತ್ತೆ ಆರಂಭವಾಗಿದೆ. ಹೊಸ ಸಂಚಿಕೆಯಲ್ಲಿ ಕುತೂಹಲಕಾರಿ ಬೆಳವಣಿಗೆ ನಡೆಯಿತು. ಕ್ಯಾಪ್ಟನ್ ರೂಂನಲ್ಲಿ ಕಪ್ಪು ಬಣ್ಣದ ಆಕಾರವೊಂದು ನಡೆದು ಹೋಗಿದ್ದನ್ನು ನಾನು ನೋಡಿದೆ ಎಂದು ಬ್ರೋ ಗೌಡ, ಪ್ರಿಯಾಂಕ ತಿಮ್ಮೇಶ್ ಬಳಿದ್ದು ಆತಂಕಕ್ಕೆ ಕಾರಣವಾಯಿತು.
ಅದಕ್ಕೆ ಹೌದಾ ಎಂದು ಉದ್ಘರಿಸಿದ ಪ್ರಿಯಾಂಕಾ, ನಾನು ಇಲ್ಲಿಯೇ ಹೆಚ್ಚಾಗಿ ರೆಸ್ಟ್ ರೂಂಗೆ ಹೋಗಿ ಬರುತ್ತಿರುತ್ತೇನೆ. ಆದರೂ, ನಾನು ಕಣ್ಣಾರೆ ಕಾಣುವ ತನಕ ನಂಬುವುದಿಲ್ಲ ಎಂದರು.
ಇದಾದ ಬಳಿಕ ಚಕ್ರವರ್ತಿ ಚಂದ್ರಚೂಡ್ ಅವರನ್ನು ಕ್ಯಾಪ್ಟನ್ ರೂಂಗೆ ಕರೆದು ಎಲ್ಲವನ್ನೂ ಶಮಂತ್ ವಿವರಿಸಿದರು. ಯಾವುದೋ ನೆರಳು ಕಂಡಿರಬಹುದು ಮತ್ತೊಮ್ಮೆ ಈ ರೀತಿ ಆದರೆ ನನಗೆ ತೋರಿಸು ಎಂದು ಚಂದ್ರಚೂಡ್ ಹೇಳಿದರು.

ಶಮಂತ್ ಕ್ಯಾಮೆರಾ ಬಳಿ ನಿಂತು, ಘಟನೆ ನಡೆದಾಗಿನಿಂದ ಆತಂಕ ಕಾಡುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ, ಶಮಂತ್ ನೋಡಿದ್ದು ನಿಜವೇ ಅಥವಾ ಇದು ಒಂದು ಗೇಮ್ ಪ್ಲಾನ್ ಇರಬಹುದೇ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನು ಕಾಡುತ್ತದೆ.