120 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಅದ್ಧೂರಿಯಾಗಿ ಇಂದು ತೆರೆ ಬೀಳುತ್ತಿದೆ. ನಿನ್ನೆ ರಾತ್ರಿ ಗ್ರಾಂಡ್ ಫಿನಾಲೆಯ ಮೊದಲ ಹಂತ ಮುಗಿದಿದ್ದು, ಇಂದು ರಾತ್ರಿ ಬಿಗ್ ಬಾಸ್ನ ವಿನ್ನರ್ ಯಾರು ಎಂಬ ವಿಷಯ ಬಹಿರಂಗವಾಗಲಿದೆ.
ಹೌದು, ನಿರೂಪಕ ಸುದೀಪ್ ಇಂದು ಮನೆ ಒಳಗೆ ತೆರಳಿ ಅಲ್ಲಿ ಉಳಿದಿರುವ ಇಬ್ಬರು ಸ್ಪರ್ಧಿಗಳನ್ನು ಬಿಗ್ಬಾಸ್ ವೇದಿಕೆಗೆ ಕರೆತಂದು ಅಂತಿಮವಾಗಿ ವಿಜೇತರ ಹೆಸರನ್ನು ಘೋಷಿಸಲಿದ್ದಾರೆ. ಈ ಮೂಲಕ 8ನೇ ಸೀಸನ್ ಅಧಿಕೃತವಾಗಿ ಮುಕ್ತಾಯವಾಗಲಿದೆ.
ಶನಿವಾರ ಮನೆಯಿಂದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಹೊರಬಂದಿದ್ದಾರೆ. ಐದನೇ ಸ್ಪರ್ಧಿಯಾಗಿ ಪ್ರಶಾಂತ್ ಸಂಬರಗಿ ಮನೆಯಿಂದ ಹೊರಬಂದ ಕೆಲವೇ ತಾಸುಗಳಲ್ಲಿ ನಾಲ್ಕನೇ ಸ್ಪರ್ಧಿಯಾಗಿ ವೈಷ್ಣವಿ ಗೌಡ ಮನೆಯಿಂದ ಹೊರಬಂದರು. ಪ್ರಶಾಂತ್ 6,69,020 ಮತಗಳನ್ನು ಪಡೆದರೆ, ವೈಷ್ಣವಿ ಗೌಡ 10,21,831 ಮತಗಳನ್ನು ಪಡೆದು ಮನೆಯಿಂದ ಹೊರಬಂದರು.
ಸದ್ಯಕ್ಕೆ ಮನೆಯಲ್ಲಿ ಅರವಿಂದ್ ಕೆ ಪಿ, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಮಾತ್ರ ಉಳಿದಿದ್ದು, ಈ ಮೂವರ ಪೈಕಿ ಇಬ್ಬರು ಮಾತ್ರ ಅಂತಿಮ ಸುತ್ತಿಗೆ ಹೋಗಲಿದ್ದಾರೆ. ಇಂದು ಗೆಲುವಿನ ಹಾರ ಯಾರ ಕೊರಳಿಗೆ ಎಂದು ಬಹಿರಂಗವಾಗಲಿದೆ.