ಯಾವ ನಟ-ನಟಿಯಾಗಲೀ ತಾವು ಅಭಿನಯಿಸುತ್ತಿರುವ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದರೆ ಬೇಸರ ಮಾಡಿಕೊಳ್ಳುವುದು ಸಹಜ. ಇದೀಗ 'ನಂದಿನಿ' ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿರುವುದಕ್ಕೆ ಕಾವ್ಯಶಾಸ್ತ್ರಿ ಬೇಸರ ಮಾಡಿಕೊಂಡಿದ್ದಾರೆ.
ಕಾವ್ಯ ಶಾಸ್ತ್ರಿ ಅಭಿನಯದ 'ನಂದಿನಿ' ಧಾರಾವಾಹಿ ಇದೇ ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ. ತಮ್ಮ ಪಯಣದ ಬಗ್ಗೆ ಭಾವುಕವಾಗಿ ಬರೆದುಕೊಂಡಿರುವ ಕಾವ್ಯ ಶಾಸ್ತ್ರಿ, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. 'ಮತ್ತೊಂದು ಅದ್ಭುತವಾದ ಪಯಣ ಮುಕ್ತಾಯವಾಗಿದೆ. 'ನಂದಿನಿ' ಸೀರಿಯಲ್ ನನಗೆ ತುಂಬಾ ಒಳ್ಳೆಯ ನೆನಪುಗಳನ್ನು ಕೊಟ್ಟಿದೆ. ಎಲ್ಲಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ 'ನಂದಿನಿ' ಧಾರಾವಾಹಿಯು ಒಬ್ಬ ಕಲಾವಿದೆಯಾಗಿ ನನಗೆ ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಹಾಗೂ ನನ್ನನ್ನು ನಾನು ಸುಧಾರಿಸಿಕೊಳ್ಳಲು ಬಹು ದೊಡ್ಡ ಅವಕಾಶ ನೀಡಿದೆ' ಎಂದಿದ್ಧಾರೆ.
- " class="align-text-top noRightClick twitterSection" data="
">
ಕಾವ್ಯ ಶಾಸ್ತ್ರಿ ಅವರ ಕಿರುತೆರೆ ಕರಿಯರ್ನಲ್ಲಿ ಈ ಧಾರಾವಾಹಿ ತುಂಬಾ ಮಹತ್ತರವಾದುದು. ಅದಕ್ಕೆ ಕಾರಣವೂ ಇದೆ. ಈ ಮೊದಲು 'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿ ಶ್ರದ್ಧಾ ಆಗಿ ನಟಿಸಿ ಮನೆ ಮಾತಾದ ಕಾವ್ಯ, 'ನಂದಿನಿ' ಧಾರಾವಾಹಿಯಲ್ಲಿ ದೇವಸೇನಾ ಆಗಿ ಅಭಿನಯಿಸುತ್ತಿದ್ದರು. ನಂತರ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದ ಕಾವ್ಯ ಮತ್ತೆ ಅದೇ ಧಾರಾವಾಹಿಯಲ್ಲಿ ತ್ರಿಶಲಾ ಆಗಿ ಅಭಿನಯಿಸಿದ್ದರು. ಕಿರುತೆರೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಓರ್ವ ಕಲಾವಿದೆ ಎರಡು ಭಿನ್ನ ಭಿನ್ನ ಪಾತ್ರ ನಿರ್ವಹಿಸಿರುವುದು. ಧಾರಾವಾಹಿಯಿಂದ ಹೊರಬಂದ ಬಳಿಕ ಮತ್ತೊಮ್ಮೆ ಅದೇ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿರುವುದು ಸದ್ಯದ ಮಟ್ಟಿಗೆ ಕಾವ್ಯ ಶಾಸ್ತ್ರಿ ಒಬ್ಬರಿಗೆ ಮಾತ್ರ ಎನ್ನಬಹುದು.
ತನ್ನನ್ನು 'ನಂದಿನಿ' ಕುಟುಂಬದ ಸದಸ್ಯೆಯಾಗಿ ಸ್ವೀಕರಿಸಿದ ರಮೇಶ್ ಅರವಿಂದ್ ಅವರಿಗೆ ಧನ್ಯವಾದ. ಹಾಗೂ 'ನಂದಿನಿ' ತಂಡದವರು ನೀಡಿದ ಪ್ರೋತ್ಸಾಹ, ಬೆಂಬಲಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ರೇಖಾ ಕೃಷ್ಣಪ್ಪ, ಜಯಶ್ರೀ ರಾಜ್, ರಶ್ಮಿ ಹೆಚ್, ವಿನಯ್ ಗೌಡ, ಅನು ಅಯ್ಯಪ್ಪ, ರವಿ ಭಟ್, ನಿತ್ಯಾ ರಾಮ್, ಶ್ರೀಕಾಂತ್ ಹೆಬ್ಳೀಕರ್,ಛಾಯಾ ಸಿಂಗ್ , ನಿತ್ಯಾರಾಮ್ ಹಲವರನ್ನು ಕಾವ್ಯಶಾಸ್ತ್ರಿ ಈ ವೇಳೆ ನೆನಪಿಸಿಕೊಂಡಿದ್ದಾರೆ.