ETV Bharat / sitara

ಸರಿಗಮಪ ವೇದಿಕೆಯಲ್ಲಿ ಸರ್ಕಾರಿ ಶಾಲೆ ತಾಕತ್ತು ತೋರಿದ ರುಬೀನ: ಜಡ್ಜ್​ಗಳು ಕೊಟ್ರು ಅಮೂಲ್ಯ ಗಿಫ್ಟ್​ - ಸರಿಗಮಪ ವೇದಿಕೆ

ಸರಿಗಮಪ ಕಳೆದ ಸಂಚಿಕೆಯಲ್ಲಿ ಭಾಗವಹಿಸಿದ್ದ ಹಾವೇರಿ ಜಿಲ್ಲೆಯ ರುಬೀನ ಎಂಬ ಪ್ರತಿಭೆ 'ಗೊಂಬೆ ಹೇಳುತೈತೆ' ರಾಗಕ್ಕೆ ಸರ್ಕಾರಿ ಶಾಲೆಗೆ ಸಂಬಂಧಿಸಿದ ಹಾಡನ್ನು ಹಾಡಿ ಅಲ್ಲಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದರು.

ಹಂಸಲೇಖ, ರುಬೀನ, ವಿಜಯ್ ಪ್ರಕಾಶ್​
author img

By

Published : Mar 18, 2019, 10:53 AM IST

ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಕೂಡಾ ಒಂದು. ಈಗಷ್ಟೇ ಕಾರ್ಯಕ್ರಮದ 16ನೇ ಸೀಸನ್ ಆರಂಭವಾಗಿ 19 ಪುಟ್ಟ ಸ್ಪರ್ಧಿಗಳು ವೇದಿಕೆ ಮೇಲೆ ಹಾಡುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ಈ 19 ಸ್ಪರ್ಧಿಗಳಲ್ಲಿ ಒಂದೊಂದು ಮಕ್ಕಳು ಕೂಡಾ ಒಂದೊಂದು ವಿಶೇಷತೆ ಹೊಂದಿದ್ದಾರೆ. ಅದರಲ್ಲಿ ಎಲ್ಲಕ್ಕಿಂತ ಪುಟ್ಟ ವಯಸ್ಸಿನ ಪ್ರತಿಭೆ ಎಂದರೆ ಮೂರೂವರೆ ವರ್ಷದ ಜ್ಞಾನ. 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ ಇಷ್ಟು ಚಿಕ್ಕ ವಯಸ್ಸಲ್ಲೇ ಸಿನಿಮಾ ಹಾಡನ್ನು ಕಲಿತು ಮುದ್ದು ಮುದ್ದಾಗಿ ಹಾಡುವ ಜ್ಞಾನ ಕೆಲವೇ ದಿನಗಳಲ್ಲಿ ಕನ್ನಡಿಗರ ಮನಸ್ಸು ಗೆದ್ದದ್ದು ಮಾತ್ರ ನಿಜ.

Rubina 2
ಹಂಸಲೇಖ, ರುಬೀನ, ವಿಜಯ್ ಪ್ರಕಾಶ್​

ಇನ್ನು ಕಳೆದ ಸಂಚಿಕೆಯಲ್ಲಿ ಜಡ್ಜ್​​​​ಗಳ ಕಣ್ಣಂಚು ಒದ್ದೆಯಾಗುವಂತೆ ಮಾಡಿದ್ದು ರುಬೀನ ಎಂಬ ಗ್ರಾಮೀಣ ಪ್ರತಿಭೆ. 'ಎಂತಾ ಮೋಜಿನ ಕುದುರಿ ಹತ್ತಿದ ಮ್ಯಾಲ' ಹಾಡನ್ನು ಮೊದಲು ಹಾಡಿದರು.

ಮತ್ತೊಂದು ಹಾಡು ಹಾಡುವಂತೆ ಜಡ್ಜ್ ಕೇಳಿದಾಗ ರಾಜಕುಮಾರ ಸಿನಿಮಾದ 'ಗೊಂಬೆ ಹೇಳುತೈತೆ ' ಹಾಡನ್ನು ಹಾಡುತ್ತಾ ತನಗೇ ಅರಿವಿಲ್ಲವಂತೆ ಹಾಡಿನ ಕೊನೆಯಲ್ಲಿ ಸರ್ಕಾರಿ ಶಾಲೆ ಕುರಿತ ಸಾಲುಗಳನ್ನು ಸೇರಿಸಿದ್ದಳು. ಒಂದು ಕ್ಷಣ ಅಚ್ಚರಿಗೊಳಗಾದ ಜಡ್ಜ್​ಗಳು ಅದೇ ಹಾಡನ್ನು ಪೂರ್ತಿ ಹಾಡುವಂತೆ ಕೇಳಿದರು.

'ಎಷ್ಟು ಚೆಂದ ಅಯ್ತೆ ಎಷ್ಟು ಅಂದ ಅಯ್ತೆ ನಮ್ಮೂರ ಶಾಲೆ' ಎಂದು ಹಾಡಿದಾಗ ನಿಜಕ್ಕೂ ಅಲ್ಲಿದ್ದವರೆಲ್ಲಾ ರುಬೀನ ಹಾಡಿಗೆ ತಲೆತೂಗಿದರು. ಹಾಡು ಮುಗಿದಾಗ ಜಡ್ಜ್​​ಗಳೆಲ್ಲರೂ ರುಬೀನ ಬಳಿಗೆ ಬಂದು ಅವಳ ಹಾಡನ್ನು ಹೊಗಳಿದಾಗ ಅಲ್ಲೇ ಕುಳಿತಿದ್ದ ರುಬೀನ ತಂದೆ ಹುಸೇನ್ ಸಾಬ ಬಹಳ ಖುಷಿ ಪಟ್ಟರು.

ಮೂವರು ಜಡ್ಜ್​ಗಳು ರುಬೀನಗೆ ಒಂದು ಬುಕ್​​ ಹಾಗೂ ಪೆನ್​​​​​ ಉಡುಗೊರೆಯಾಗಿ ಕೊಟ್ಟರು. ಜತೆಗೆ ತಮ್ಮ ಕಾರ್ಯಕ್ರಮದ ಒಂದು ಸಂಚಿಕೆಯನ್ನು ಸರ್ಕಾರಿ ಶಾಲೆಗಳಿಗೆ ಮೀಸಲಿಡುವ ಸಲುವಾಗಿ ಎಲ್ಲರೂ ಸರ್ಕಾರಿ ಶಾಲೆ ಸಮವಸ್ತ್ರದಲ್ಲಿ ಬರುವುದಾಗಿ ಹೇಳಿದರು. ಅಲ್ಲದೇ ರುಬೀನ ಹಾಡಿದ ಹಾಡನ್ನು ಪುನೀತ್​ ರಾಜ್​ಕುಮಾರ್​ ಅವರಿಗೆ ಕೇಳಿಸುವುದಾಗಿ ಗಾಯಕ ವಿಜಯ್​ ಪ್ರಕಾಶ್​ ರುಬೀನಗೆ ತಿಳಿಸಿದರು.

ಹಾವೇರಿ ಜಿಲ್ಲೆಯ ಮವ್ವಂಡಿ ಎಂಬ ಪುಟ್ಟ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಬೀನಳಂತ ಗ್ರಾಮೀಣ ಪ್ರತಿಭೆ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂಬುದೇ ಎಲ್ಲರ ಆಶಯ.

Intro:Body:

Sa re ga ma pa

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.