2020 ನೇ ಸಾಲಿನ ಜೀ ಕುಟುಂಬ ಅವಾರ್ಡ್ಸ್ ಅದ್ಧೂರಿಯಾಗಿ ನಡೆದಿದೆ. ವಿಭಿನ್ನ ಕ್ಯಾಟಗಿರಿಯಲ್ಲಿ ಅನೇಕ ನಟ-ನಟಿಯರು ಪ್ರಶಸ್ತಿ ಪಡೆದಿದ್ದಾರೆ. ಕಿರುತೆರೆಯ ಸೆನ್ಸೇಷನ್ ಸ್ಟಾರ್ ಎಂದೇ ಜನಪ್ರಿಯರಾದ ಅನಿರುದ್ಧ್ಗೆ ಈ ಬಾರಿ ಉತ್ತಮ ನಟ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಗಾಗಿ ತನ್ನನ್ನು ಆಯ್ಕೆ ಮಾಡಿದ್ದಕ್ಕೆ ಅನಿರುದ್ಧ್ ಧನ್ಯವಾದ ಕೂಡಾ ಅರ್ಪಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅನಿರುದ್ಧ್, "ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ. ಜೀ ವಾಹಿನಿಯಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ನಾನು ಎಂಬ ವಿಚಾರ ನನಗೆ ಬಹಳ ಖುಷಿ ನೀಡಿದೆ. ಚಿತ್ರರಂಗಕ್ಕೆ ಬರಲು ನನಗೆ ಪ್ರೋತ್ಸಾಹ ನೀಡಿದ ನನ್ನ ತಂದೆ-ತಾಯಿ, ಸಹೋದರಿ ಅರುಂಧತಿ, ಏನೂ ಕೆಲಸವಿಲ್ಲದಿದ್ದಾಗ ನನಗೆ ಧೈರ್ಯ ತುಂಬಿದ ಪತ್ನಿ ಕೀರ್ತಿ, ನನಗೆ ಆಶೀರ್ವಾದ ಮಾಡಿದ ಅತ್ತೆಯವರಾದ ಭಾರತಿ ವಿಷ್ಣುವರ್ಧನ್, ಮಕ್ಕಳಾದ ಜ್ಯೇಷ್ಠವರ್ಧನ್, ಶ್ಲೋಕ ಹಾಗೂ ಕನ್ನಡಿಗರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಷ್ಟೇ ಅಲ್ಲ ನನ್ನ ತಂದೆ ಸಮಾನರಾದ ಡಾ. ವಿಷ್ಣುವರ್ಧನ್ ನನಗೆ ಶ್ರೀರಕ್ಷೆಯಾಗಿದ್ದರು ಎಂದು ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="">
ಇವರೆಲ್ಲರೊಂದಿಗೆ ಜೀ ಕನ್ನಡದ ರಾಘವೇಂದ್ರ ಹುಣಸೂರು, ತಾಂತ್ರಿಕ ವರ್ಗ, ಸಿಬ್ಬಂದಿಗಳಿಗೆ, ಸಹಕಲಾವಿದರಿಗೆ, ಮಾಧ್ಯಮದವರಿಗೆ ಕೂಡಾ ಅನಿರುದ್ಧ್ ಧನ್ಯವಾದ ಅರ್ಪಿಸಿದ್ದಾರೆ. ನಾವು ಎಂದಿಗೂ ಇದೇ ರೀತಿ ಜೊತೆ ಜೊತೆಯಲಿ ಇರೋಣ ಎಂದು ಅನಿರುದ್ಧ್ ಬಹಳ ಭಾವಪೂರ್ಣವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
