ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿರುವ ಜೊತೆಜೊತೆಯಲ್ಲಿ ಸೀರಿಯಲ್ನ ಎಲ್ಲಾ ಪಾತ್ರಗಳು ಜನಜನಿತ. ಇದರಲ್ಲಿ ಮೀರಾ ಹೆಗಡೆ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಾನಸ ಮನೋಹರ್ ಲಾಕ್ಡೌನ್ ಸಮಯದಲ್ಲಿ ತಮ್ಮ ಫಿಟ್ ನೆಸ್ ಕುರಿತು ಗಮನಹರಿಸಿದ್ದಾರೆ.
12 ಕೆಜಿ ತೂಕ ಇಳಿಸಿಕೊಂಡಿರುವ ಮಾನಸ ಅವರು ಲಾಕ್ಡೌನ್ ಸಮಯದಲ್ಲಿ ಪರ್ಸನಲ್ ಟ್ರೈನರ್ ನೇಮಿಸಿಕೊಂಡು ಅವರು ಕಳುಹಿಸುವ ವರ್ಕೌಟ್ ವಿಡಿಯೋ ನೋಡಿ ಪ್ರತಿದಿನ 2 ಗಂಟೆ ವರ್ಕೌಟ್ ಮಾಡುತ್ತಿದ್ದರು. ಆ ಮೂಲಕ ಬರೋಬ್ಬರಿ 12 ಕೆಜಿ ಕಡಿಮೆಯಾಗಿದ್ದಾರೆ.
ವರ್ಕೌಟ್ ಜೊತೆಗೆ ಮನೆಯ ಟೆರೇಸ್ನಲ್ಲಿ ಸುಮಾರು ಒಂದು ಗಂಟೆ ವಾಕಿಂಗ್ ಮಾಡುತ್ತಿದ್ದ ಮಾನಸ ಸಾಕಷ್ಟು ನೀರು ಕುಡಿಯುತ್ತಿದ್ದರಂತೆ. ಇದರ ಜೊತೆಗೆ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ವರ್ಕೌಟ್ ಮಾಡುವುದು ಒಳ್ಳೆಯದಲ್ಲ, ಸೆಲೆಬ್ರಿಟಿಗಳು ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ನೋಡಿ ನಾವು ಅದನ್ನು ಫಾಲೋ ಮಾಡುವುದು ಒಳಿತಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.
ಇನ್ನು ಯಾರೋ ಹೇಳಿದ್ದನ್ನು ಕೇಳಿ ವರ್ಕೌಟ್, ಡಯಟ್ ಮಾಡಿ ಅನುಸರಿಸುವುದರಿಂದ ದೇಹದ ಮೇಲೆ ಪರಿಣಾಮ ಆಗಬಹುದು, ಹೀಗಾಗಿ ಡಯಟಿಶಿಯನ್ ಭೇಟಿ ಮಾಡಿ ಅವರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.
ಅಲ್ಲದೆ ಸಣ್ಣಗಾಗಬೇಕೆಂದು ಊಟ, ತಿಂಡಿ ಬಿಡುವುದರಿಂದ ಯಾವುದೇ ಪ್ರಯೋಜನ ಸಿಗಲಾರದು. ಇದರ ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ತಿನ್ನದೇ ಹೋದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು ಎಂದಿದ್ದಾರೆ.
ಯಾವುದೇ ಆಹಾರ ಇದ್ದರೂ ನಮ್ಮ ದೇಹಕ್ಕೆ ಎಷ್ಟು ಅಗತ್ಯವಿದೆ ಎಂಬುದನ್ನು ನೋಡಿ ತೆಗೆದುಕೊಂಡರೆ ಒಳಿತು. ಇನ್ನು ಸಕ್ಕರೆ, ಉಪ್ಪಿನಿಂದ ದೇಹಕ್ಕೆ ಅಷ್ಟೊಂದು ಉಪಯೋಗ ಇಲ್ಲ ಎನ್ನುವ ಅವರು ಕಾಫಿ, ಟೀ ಇವುಗಳಿಗೆ ಬೆಲ್ಲ, ಜೇನುತುಪ್ಪ ಬಳಸೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.