ಬಾಲಿವುಡ್ನ ಖ್ಯಾತ ನಟಿ ದಿ.ಶ್ರೀದೇವಿ ಹಾಗು ಬೋನಿ ಕಪೂರ್ ಅವರ ಪ್ರಥಮ ಪುತ್ರಿ ಜಾಹ್ನವಿ ಕಪೂರ್ಗೆ ಇಂದು 25ನೇ ಹುಟ್ಟುಹಬ್ಬದ ಸಡಗರ. ನೆಚ್ಚಿನ ನಟಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.


ನಿರ್ಮಾಪಕ ಬೋನಿ ಕಪೂರ್ ಅವರು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಮಗಳ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ನಮ್ಮ ಜೀವನದ ಸಂತೋಷ ನೀನು, ಈಗ ಹೇಗಿದ್ದೀಯೋ ಹಾಗೆಯೇ ಇರು. ಸರಳ ಮತ್ತು ಸಹಾಯ ಮಾಡುವ ಗುಣ ನಿನ್ನನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಲಿದೆ. ಹ್ಯಾಪಿ ಬರ್ತ್ಡೇ ಮಗಳೇ' ಎಂದು ಪೋಸ್ಟ್ ಮಾಡಿದ್ದಾರೆ.


ಇನ್ನು ಜಾಹ್ನವಿ ಕಪೂರ್ ಬಾಲಿವುಡ್ ಪ್ರವೇಶಿಸಿದ್ದು 2018ರಲ್ಲಿ ತೆರೆಕಂಡ ‘ಧಡಕ್’ ಚಿತ್ರದ ಮೂಲಕ. ಪುತ್ರಿಯ ಈ ಚಿತ್ರದ ಬಗ್ಗೆ ಶ್ರೀದೇವಿಗೆ ಅಪಾರ ನಿರೀಕ್ಷೆಗಳಿತ್ತು. ಆದರೆ ‘ಧಡಕ್’ ರಿಲೀಸ್ ಆಗುವ ಮುನ್ನವೇ ಅವರು ನಿಧನರಾದರು. ಈ ಚಿತ್ರಕ್ಕೆ ಜಾಹ್ನವಿ 'ಜೀ ಸಿನಿ ಪ್ರಶಸ್ತಿ' ಪಡೆದಿದ್ದಾರೆ.


‘ಧಡಕ್’ ಸೇರಿದಂತೆ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’, ‘ರೂಹಿ’ ಚಿತ್ರಗಳಲ್ಲಿ ಅಭಿನಯಿಸಿರುವ ಜಾಹ್ನವಿ ಕಪೂರ್ ಸದ್ಯಕ್ಕೆ ‘ದೋಸ್ತಾನಾ 2’, ‘ಗುಡ್ ಲಕ್ ಚೆರ್ರಿ’, ‘ಮಿಲಿ’ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.


ಫಿಟ್‌ನೆಸ್‌ನಲ್ಲಿ ಅಪಾರ ಆಸಕ್ತಿ ಹೊಂದಿರುವ ಜಾಹ್ನವಿ ಕಪೂರ್ ಅವರು ಆಗಾಗ ಜಿಮ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಕರ್ಷಕ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

