ETV Bharat / sitara

ಬೈಕ್ ರೇಸರ್​​​ ಅರವಿಂದ್ ದೇಹದಲ್ಲಿ ಎಷ್ಟು ಸ್ಕ್ರೂ, ರಾಡ್​​​​ಗಳಿವೆ ಗೊತ್ತಾ...?

ಬಿಗ್​ ಬಾಸ್ 8 ಸ್ಪರ್ಧಿ ಅರವಿಂದ್​​​​ಗೆ ಹಲವು ಬಾರಿ ಅಪಘಾತವಾಗಿದ್ದು ಸರ್ಜರಿ ಕೂಡಾ ಆಗಿದೆಯಂತೆ. ಇನ್ನು ಪ್ರಶಾಂತ್ ಸಂಬರಗಿ ತಮ್ಮ ಪತ್ನಿಯನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ಕೂಡಾ ನಿನ್ನೆ ದೊಡ್ಮನೆಯಲ್ಲಿ ನಡೆಯಿತು.

Big boss 8
ಬಿಗ್​ ಬಾಸ್ 8
author img

By

Published : Mar 18, 2021, 12:23 PM IST

ಬೈಕ್ ರೇಸರ್​​​ ಅರವಿಂದ್ ದೇಹದಲ್ಲಿ ಸ್ಕ್ರೂ, ರಾಡ್​​​​​ಗಳೇ ಇವೆಯಂತೆ. ಹೀಗಂತ ಹೇಳಿದ್ದು ಸ್ವತ: ಅರವಿಂದ್​​​​​​​​​​​​​​​​​​​​​​​. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರ್‍ಯಾಲಿಗಳಲ್ಲಿ, ಬೈಕ್ ರೇಸಿಂಗ್ ವೇಳೆ ಹಲವು ಬಾರಿ ಅವರಿಗೆ ಅಪಘಾತ ಆಗಿದೆಯಂತೆ. ಈ ವೇಳೆ ಅವರಿಗೆ ಶಸ್ತ್ರಚಿಕಿತ್ಸೆ ಕೂಡಾ ಆಗಿದೆಯಂತೆ. ಹೀಗಾಗಿ ಅವರ ದೇಹದಲ್ಲಿ ಸಾಕಷ್ಟು ಸ್ಕ್ರೂಗಳಿವೆಯಂತೆ.

Big boss 8
ದಿವ್ಯ, ಅರವಿಂದ್

ನನ್ನ ದೇಹದಲ್ಲಿ 16 ಸ್ಕ್ರೂಗಳಿವೆ. ಒಂದು ರಾಡ್,​ ಒಂದು ಪ್ಲೇಟ್​ ಇದೆ ಎಂದಾಗ ದಿವ್ಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಸ್ಕ್ರೂ, ರಾಡ್​ ಮತ್ತು ಪ್ಲೇಟ್​​​​​​​​​​ ತೂಕ ಒಂದು ಕೆಜಿಯಷ್ಟು ಇರಬಹುದಾ ಎಂದು ದಿವ್ಯ ಕೇಳಿದಾಗ, ಇಲ್ಲ ಅವು ಕೇವಲ ಗ್ರಾಂಗಳಷ್ಟೇ ಎಂದು ಅರವಿಂದ್ ಹೇಳಿದರು. ಇನ್ನು ಯಾವಾಗಲೂ ಪಟ ಪಟ ಮಾತನಾಡುತ್ತಿದ್ದ ಪ್ರಶಾಂತ್ ಸಂಬರಗಿ ಅಳುತ್ತಿದ್ದನ್ನು ನೋಡಿ ಬಿಗ್​ಬಾಸ್ ಅವರನ್ನು ಕನ್ಫೆಷನ್​​​ ರೂಮ್​​​​ಗೆ ಬರಲು ಹೇಳಿದ್ದಾರೆ. "ನನ್ನ ಪತ್ನಿ ಆಯುರ್ವೇದಿಕ್​ ವೈದ್ಯೆ. ಅವರಿಗೆ ನನ್ನ ಧ್ವನಿ ಹೋಗಿರುವುದು ನೋಡಿ ಔಷಧ ಕಳುಹಿಸಿಕೊಟ್ಟಿದ್ದಾರೆ. ಇಷ್ಟು ದಿನ ಅವರ ನೆನಪು ಆಗುತ್ತಾ ಇರಲಿಲ್ಲ. ಈಗ ಔಷಧ ಕಳುಹಿಸಿಕೊಟ್ಟಿದ್ದರಿಂದ ಅವಳ ನೆನಪಾಗುತ್ತಿದೆ ಎಂದರು. ನಂತರ ಕಣ್ಣು ಒರಿಸಿಕೊಂಡು ಸುಧಾರಿಸಿಕೊಂಡರು.

Big boss 8
ಪ್ರಶಾಂತ್ ಸಂಬರಗಿ

ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಸುಮಂತ್ ಶೈಲೇಂದ್ರ...!

ಮತ್ತೊಂದೆಡೆ ದಿವ್ಯ ಉರುಡುಗ ಹಾಗೂ ಅರವಿಂದ್ ಕುಳಿತು ಮಾತನಾಡುತ್ತಿದ್ದಾಗ ಶಂಕರ್ ಅಶ್ವತ್ಥ್​ ಅವರಿಬ್ಬರನ್ನು ಬಂದು ಮಾತನಾಡಿಸಿದರು. ನನಗೆ ವಯಸ್ಸಾಗಿದೆ. ತೊಂದರೆ ಆಗಿದೆ ಎಂದು ಭಾವಿಸಬೇಡಿ. ಎಲ್ಲರೂ ಹೇಗೆ ಹೇಳ್ತಾರೋ ಹಾಗೆ ಮಾಡ್ತೇನೆ. ನನ್ನ ಬಗ್ಗೆ ಚಿಂತಿಸಬೇಡಿ. ಬಿಗ್​ ಬಾಸ್​ ಕೊಟ್ಟಿದ್ದನ್ನು ಇಟ್ಟುಕೊಳ್ಳುವ ಎಲ್ಲಾ ಹಕ್ಕು ನಿಮಗಿದೆ. ನನ್ನ ಮಗ, ಮಗಳಿಗೂ ಇದನ್ನೇ ಹೇಳುತ್ತಿದ್ದೆ" ಎಂದರು ಶಂಕರ್‌. ಅವರ ಮಾತು ಕೇಳಿ ದಿವ್ಯಾ ಹಾಗೂ ಅರವಿಂದ್​ ಸಂತೋಷ ವ್ಯಕ್ತಪಡಿಸಿದರು.

Big boss 8
ಶಂಕರ್ ಅಶ್ವತ್ಥ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.