ETV Bharat / sitara

ದೇಶಾಭಿಮಾನ ಸಾರುವ 'ಹೇ ಹೇಳು ದೇಶ ಪ್ರೇಮಿಯೇ' ಹಾಡು ಬಿಡುಗಡೆ

74ನೇ ಸ್ವಾತಂತ್ಯ್ರ ದಿನಾಚರಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಈ ಸ್ವಾತಂತ್ಯ್ರೋತ್ಸವದ ವಿಶೇಷವಾಗಿ ವಂದೇ ಮಾತರಂ ಎಂಬ ಹಾಡು ಬಿಡುಗಡೆಯಾಗಿದ್ದು ಶ್ರೀಮುರಳಿ, ಪಾರುಲ್ ಯಾದವ್ , ಅನಿರುದ್ಧ್ ತಜ್ಕರ್ ಸೇರಿದಂತೆ ಹಲವು ನಟ-ನಟಿಯರು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Helu vandemataram
'ಹೇ ಹೇಳು ದೇಶ ಪ್ರೇಮಿಯೇ'
author img

By

Published : Aug 12, 2020, 3:15 PM IST

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ದೇಶಭಕ್ತಿ ಕುರಿತಂತೆ ಹಾಡುಗಳು ಬಂದಿವೆ. ಆ ಸಾಲಿಗೆ ಈಗ ಮತ್ತೊಂದು ದೇಶಾಭಿಮಾನದ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿಯೇ ತಯಾರಾಗಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಗೀತ ನಿರ್ದೇಶಕ ಎಸ್. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿರುವ 'ಹೇ ಹೇಳು ದೇಶ ಪ್ರೇಮಿಯೇ ವಂದೇ ಮಾತರಂ ನಮ್ಮ ಕೂಗು..' ಎಂಬ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಹಾಡಿನಲ್ಲಿ ನಟ ಶ್ರೀಮರಳಿ, ಅನಿರುದ್ಧ್ ಜತ್ಕರ್​​​, ನಟಿಯರಾದ ಪಾರುಲ್ ಯಾದವ್, ನೀತುಶೆಟ್ಟಿ, ಅದ್ವಿತಿ ಶೆಟ್ಟಿ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ನಾಗೇಂದ್ರ ಅರಸ್, ಯತಿರಾಜ್ ಸೇರಿದಂತೆ ಇನ್ನಿತರ ಸಿನಿಮಾ ತಾರೆಯರು ಕಾಣಿಸಿಕೊಂಡು ದೇಶಾಭಿಮಾನ ಮೆರೆದಿದ್ದಾರೆ.

  • " class="align-text-top noRightClick twitterSection" data="">

ವಂದೇ ಮಾತರಂ ಹಾಡಿಗೆ ವಿಜಯ್ ಭರಮಸಾಗರ ಸಾಹಿತ್ಯ ಬರೆದಿದ್ದು ಈ ಹಾಡನ್ನು ದೇಶದ ಯೋಧರಿಗೆ ಹಾಗೂ ರೈತರಿಗೆ ಅರ್ಪಿಸಲಾಗಿದೆ. ಇದು ಸಂಗೀತ ನಿರ್ದೇಶಕ ಎಸ್​​. ಪ್ರದೀಪ್ ವರ್ಮ ನಿರ್ದೇಶನದ ಹಾಡಾಗಿದೆ. ರೆಡಿಯೋ ಜಾಕಿ ರ್‍ಯಾಪಿಡ್ ರಶ್ಮಿ, ಸಂತೋಷ್‌ ವೆಂಕಿ, ಇಂದು‌ ನಾಗರಾಜ್, ವೇದಶ್ರೀ , ಸುಗುಣ ಮೂರ್ತಿ ಪ್ರದೀಪ್ ವರ್ಮ ಹಾಗೂ ಇತರರು ಈ ಹಾಡನ್ನು ಹಾಡಿದ್ದಾರೆ.

ಈ ಹಾಡಿಗೆ ಕಿರಣ್ ಛಾಯಾಗ್ರಹಣ ಹಾಗೂ ಸಂಕಲನವಿದೆ. ಎಸ್​​​ಪಿವಿ ಸ್ಟುಡಿಯೋದಲ್ಲಿ ಹಾಡನ್ನು ರೆಕಾರ್ಡ್ ಮಾಡಲಾಗಿದ್ದು ಜಗದೀಶ್ ವೆಂಕಿ‌ ಆಲ್ಬಂ ಕ್ರಿಯೇಟಿವ್ ಹೆಡ್ ಆಗಿ‌ ಕಾರ್ಯ ನಿರ್ವಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.