ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾವಂತ ಜನರಿಗೆ ಮೊದಲು ಯಾವುದೇ ವೇದಿಕೆ ಇರಲಿಲ್ಲ. ಒಂದು ವೇಳೆ ನೀವು ಒಳ್ಳೆಯ ಸಿಂಗರ್ ಆಗಿದ್ದರೆ ಅವಕಾಶಕ್ಕಾಗಿ ಸಂಗೀತ ನಿರ್ದೇಶಕರ ಸ್ಟುಡಿಯೋಗಳಿಗೋ, ಮನೆ ಬಾಗಿಲಿಗೋ ಅಲೆದಾಡಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಾಕಷ್ಟಿದೆ. ಇಲ್ಲಿದೆ ಹೊಸ ವೇದಿಕೆ!
- " class="align-text-top noRightClick twitterSection" data="
">
ಕನ್ನಡದಲ್ಲಿ ಸಾಕಷ್ಟು ಮನರಂಜನಾ ವಾಹಿನಿಗಳಿದ್ದು, ಸಾಮಾನ್ಯ ಎಲ್ಲಾ ವಾಹಿನಿಯಲ್ಲೂ ಮ್ಯೂಸಿಕ್ ರಿಯಾಲಿಟಿ ಶೋ ಮಾಡಲಾಗುತ್ತಿದೆ. ಇನ್ನು, ಈ ಕಾರ್ಯಕ್ರಮದ ಮೂಲಕ ಎಷ್ಟೋ ಪ್ರತಿಭೆಗಳು ಕೂಡಾ ಪರಿಚಯವಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಕೂಡಾ 'ಹಾಡುತಿದೆ ಕನ್ನಡ ಕೋಗಿಲೆ' ಎಂಬ ರಿಯಾಲಿಟಿ ಶೋ ಮೂಲಕ ಕರ್ನಾಟಕದಾದ್ಯಂತ ಹೊಸ ಅಲೆ ಎಬ್ಬಿಸಿತ್ತು. ಈ ಕಾರ್ಯಕ್ರಮ ನೂರಾರು ಸಂಗೀತ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಯಶಸ್ವಿ ಎರಡು ಸಂಚಿಕೆಗಳನ್ನು ಪೂರೈಸಿದೆ.
- " class="align-text-top noRightClick twitterSection" data="
">
ಸಂಗೀತ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಕಲರ್ಸ್ ವಾಹಿನಿ ತಯಾರಾಗುತ್ತಿದ್ದು, ಹೊಸ ರಿಯಾಲಿಟಿ ಶೋ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. 'ಹಾಡು ಕರ್ನಾಟಕ' ಎಂಬ ಹೆಸರಿನ ಈ ರಿಯಾಲಿಟಿ ಶೋ ಪ್ರೋಮೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು? ಅರ್ಹತೆಗಳೇನು? ಎಂಬುದನ್ನು ಶೀಘ್ರದಲ್ಲೇ ವಾಹಿನಿ ತಿಳಿಸಲಿದೆ.