ಸ್ಯಾಂಡಲ್ವುಡ್ ನಲ್ಲಿ ಶುಕ್ರವಾರ ಬಂತು ಅಂದರೆ, ಗಾಂಧಿ ನಗರದಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗುತ್ತದೆ. ಇಂದು ಕೂಡ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಖತ್' ಸಿನಿಮಾ ಹಾಗೂ ಯುವ ನಟ ಕಿರಣ್ ಹಾವೇರಿ ನಟನೆಯ 'ಗೋರಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಕಿರಣ್ಗೆ ಇಂದು ಡಬಲ್ ಸಂಭ್ರಮ
ಸಿನಿಮಾ ಪತ್ರಕರ್ತನಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ, ಯುವ ನಟ ಕಿರಣ್ ಹಾವೇರಿ ಸಿನಿಮಾ ರಂಗಕ್ಕೆ ಬರಲು ಗೋಲ್ಡನ್ ಸ್ಟಾರ್ ಗಣೇಶ್ ಸ್ಪೂರ್ತಿಯಂತೆ. ಅಷ್ಟೇ ಅಲ್ಲದೇ ನಟ ಗಣೇಶ್ ಕಿರಣ್ ಅವರ ಗೋರಿ ಸಿನಿಮಾಗೆ ಬೆನ್ನು ತಟ್ಟಿದ್ದಾರೆ. ಗೋರಿ ಸಿನಿಮಾದ ನಾಯಕ ನಟನಾಗಿರುವ ಕಿರಣ್ಗೆ ಇಂದು ಡಬ್ಬಲ್ ಸಂಭ್ರಮ.
ಕಳೆದ ಮೂರು ವರ್ಷಗಳಿಂದ ಇಷ್ಟಪಟ್ಟು ಮಾಡಿದ ಸಿನಿಮಾ, ಜತೆಗೆ ತಮ್ಮ ನೆಚ್ಚಿನ ಹೀರೋ ಗಣೇಶ್ ಅಭಿನಯದ ಸಖತ್ ಸಿನಿಮಾ ಜತೆಗೆ ಗೋರಿ ಸಿನಿಮಾ ಒಂದೇ ದಿನ ಬಿಡುಗಡೆ ಆಗುತ್ತಿರುವುದರಿಂದ ಅವರ ಕನಸು ನನಸಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಹೈಕಳ ಜವಾರಿ 'ಗೋರಿ'
ಗೋರಿ ಸಿನಿಮಾದಲ್ಲಿ ಕಿರಣ್ ಜೋಡಿಯಾಗಿ ಸ್ಮಿತಾ ಎಂಬ ಯುವ ನಟಿ ನಟಿಸಿದ್ದಾರೆ. ಸದ್ಯ ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ಗೋರಿ ಚಿತ್ರಕ್ಕೆ , ನಿರ್ದೇಶಕ ಗೋಪಾಲಕೃಷ್ಣ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚುಟು ಚುಟು ಖ್ಯಾತಿಯ ಶಿವು ಬೇರ್ಗಿ, ಕೆ. ಕಲ್ಯಾಣ್, ಎಂ.ಹೆಚ್. ಜಗ್ಗಿನ್ ಬರೆದಿರುವ ಸಾಹಿತ್ಯಕ್ಕೆ, ವಿನು ಮನಸು ಸಂಗೀತ ನೀಡಿದ್ದಾರೆ.
'ಪ್ರೀತಿಯ ಸಮಾಧಿ' ಎಂಬ ಟ್ಯಾಗ್ಲೈನ್
ಸದ್ಯ ಗೋರಿ ಚಿತ್ರದಲ್ಲಿ, 'ಅದು ಬ್ಯಾರೇನೆ ಐತಿ' ಎಂಬ ಹಾಡು ಉತ್ತರ ಕರ್ನಾಟದ ಫ್ಲೇವರ್ನಲ್ಲಿ ಮೂಡಿ ಬಂದಿದ್ದು, ಸಖತ್ ಹಿಟ್ ಆಗಿದೆ. ಇದರ ಜತೆಗೆ ಮಂಜುನಾಥ ಹೆಗಡೆ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಗೋರಿ ಚಿತ್ರಕ್ಕಿದೆ. 'ಪ್ರೀತಿಯ ಸಮಾಧಿ' ಎಂಬ ಟ್ಯಾಗ್ಲೈನ್ ಹೊಂದಿರುವ ಗೋರಿ ಸಿನಿಮಾವನ್ನು ಸಿನಿಮಾ ಪ್ರಿಯರು ಹೇಗೆ ರಿಸೀವ್ ಮಾಡ್ತಾರೆ ಎಂಬುವುದು ಇಂದು ಗೊತ್ತಾಗಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾ ಕೂಡ, ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಗಣೇಶ್ ಫಸ್ಟ್ ಟೈಮ್ ಅಂಧನಾಗಿ ಕಾಣಿಸಿಕೊಂಡಿದ್ದು, ಬ್ಯೂಟಿ ಗರ್ಲ್ ನಿಶ್ವಿಕಾ ನಾಯ್ಡು ಜತೆಯಾಗಿದ್ದಾರೆ. ಹೀಗಾಗಿ ಗಣೇಶ್, ನಿಶ್ವಿಕಾ ನಾಯ್ಡು ಹಾಗೂ ನಿರ್ದೇಶಕ ಸಿಂಪಲ್ ಸುನಿ, ವಿಭಿನ್ನ ಶೈಲಿಯ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ವಧು, ವರರಂತೆ ರೆಡಿಯಾಗಿ ನಮ್ಮ ಸಖತ್ ಸಿನಿಮಾ ನೋಡೋದಕ್ಕೆ ಬನ್ನಿ ಎಂದು ಸಿನಿಮಾ ಪ್ರೇಕ್ಷಕರಿಗೆ ಆಹ್ವಾನ ನೀಡಿದ್ದಾರೆ.
ನಿರ್ಮಾಪಕ ನಿಶಾ ವೆಂಕಟ್ ಕೋಣಂಕಿ ಹಾಗೂ ವೆಂಕಟ್ ನಾರಾಯಣ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಜೋಡಿ ಮತ್ತೆ ಮ್ಯಾಜಿಕ್ ಮಾಡುತ್ತಾ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಇದನ್ನೂ ಓದಿ: ಅಂಧ ಮಕ್ಕಳ ಹಾವಭಾವ ನೋಡಿ ಆ ಪಾತ್ರಕ್ಕೆ ಜೀವ ತುಂಬಿದ್ದೇನೆ: 'ಸಖತ್' ಚಿತ್ರ ಕುರಿತು ನಿಶ್ವಿಕಾ ನಾಯ್ಡು ಮಾತು