ETV Bharat / sitara

Dr 56: ಸಖತ್​​ ಸದ್ದು ಮಾಡ್ತಿದೆ ಪ್ರಿಯಾಮಣಿ ನಟನೆಯ 'ಡಾ 56' ಚಿತ್ರದ ಟೀಸರ್​​ - 'ಡಿಆರ್.56' ಚಿತ್ರದ ಟೀಸರ್​​

ಬಹುಭಾಷಾ ನಟಿ ಪ್ರಿಯಾಮಣಿ (Actress Priyamani) ಹಾಗು ಪ್ರವೀಣ್ ನಟನೆಯ 'ಡಾ 56' (Dr 56 Movie) ಚಿತ್ರದ ಟೀಸರ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ಹವಾ ಸೃಷ್ಟಿಸುತ್ತಿದೆ.

'DR.56' Movie Teaser
ಟೀಸರ್​​ನಿಂದಲೇ ಸದ್ದು ಮಾಡುತ್ತಿರುವ 'ಡಿಆರ್.56' ಸಿನಿಮಾ
author img

By

Published : Nov 14, 2021, 8:36 AM IST

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಸಿನಿಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವವರು ನಟಿ ಪ್ರಿಯಾಮಣಿ (Actress Priyamani). ಇತ್ತೀಚೆಗಷ್ಟೇ ಹಿಂದಿಯ 'ದಿ ಫ್ಯಾಮಿಲಿ ಮ್ಯಾನ್​ ಹಾಗು 'ದಿ ಫ್ಯಾಮಿಲಿ ಮ್ಯಾನ್​ 2' ವೆಬ್​ ಸೀರಿಸ್​​​ನಲ್ಲಿ ನಟಿಸಿರುವ ಇವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.

'DR.56' Movie Teaser
'ಡಿಆರ್.56' ಚಿತ್ರದ ಪೋಸ್ಟರ್​​

ಕನ್ನಡದಲ್ಲಿ 'ನನ್ನ ಪ್ರಕಾರ' ಸಿನಿಮಾ (Nanna Prakara Movie) ಬಳಿಕ ವಿರಾಮ ಪಡೆದಿದ್ದ ಪ್ರಿಯಾಮಣಿ, ಇದೀಗ 'ಡಾ 56' (Dr 56) ಸಿನಿಮಾದಿಂದ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ‌. ಡಾ 56 ಚಿತ್ರದಲ್ಲಿ ನಟ ಪ್ರವೀಣ್ ಜತೆ ಇವರು ಸ್ಕ್ರೀನ್ ಹಂಚಿಕೊಂಡಿದ್ದಾರೆ.

ಸದ್ಯ ಚಿತ್ರದ ಟೀಸರ್ (Dr 56 Teaser) ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರ (Science fiction action thriller movie)ವಾಗಿದ್ದು, ಒಂದೊಂದು ದೃಶ್ಯದಲ್ಲಿಯೂ ಸ್ಕ್ರೀನ್ ಪ್ಲೇ ಕುತೂಹಲ ಮೂಡಿಸುತ್ತಾ ಹೋಗುವುದು ಟೀಸರ್​​ನಲ್ಲಿ ಕಂಡುಬರುತ್ತದೆ.

ಪ್ರವೀಣ್ ಅವರೇ ಕಥೆ ಹಾಗು ಚಿತ್ರಕಥೆ ಬರೆದು ಅಭಿನಯಿಸಿದ್ದಾರೆ. ಈ ಸಿನಿಮಾಗೆ ರಾಜೇಶ್ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಮಣಿ ತನಿಖಾಧಿಕಾರಿಯಾಗಿ (Priyamani as an Investigation Officer) ಕಾಣಿಸಿಕೊಂಡಿದ್ದಾರೆ. ರಾಕೇಶ್.ಸಿ ತಿಲಕ್ ಅವರ ಛಾಯಾಗ್ರಹಣ, ನೋಬಿನ್ ಪಾಲ್ ಅವರ ಸಂಗೀತ ಹಾಗು ಹಿನ್ನೆಲೆ ಸಂಗೀತ, ವಿಶ್ವ ಎನ್.ಎಂ ಅವರ ಸಂಕಲನ, ಶಂಕರ್ ರಾಮನ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

'DR.56' Movie Teaser
​​

ಡಾ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಷ್ಟ್ರಪ್ರಶಸ್ತಿ ವಿಜೇತ ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹರಿಹರ ಪಿಚ್ಚರ್ಸ್ ಬ್ಯಾನರ್ ಅಡಿ ಪ್ರವೀಣ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್ ಅವರ ನಿರ್ವಹಣೆ ಸಿನಿಮಾಕ್ಕಿದೆ.

ಈ ಚಿತ್ರ ಕನ್ನಡ ಹಾಗು ತಮಿಳುನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಚೂಣಿಯಲ್ಲಿವೆ.

ಇದನ್ನೂ ಓದಿ: ಹಿರಿತೆರೆ ಮೇಲೆ ಸಿಕ್ಸರ್​ ಬಾರಿಸಿ ಮನಗೆಲ್ಲುತ್ತಾರಾ ಪ್ರವೀಣ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.