ಗಿಣಿರಾಮ ಧಾರಾವಾಹಿಯ ನಾಯಕಿ ನಯನಾಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಯನಾ "ಎಲ್ಲರಿಗೂ ನಮಸ್ಕಾರ, ನನಗೆ ಕೋವಿಡ್ ಪಾಸಿಟಿವ್ ಬಂದಿದೆ.
ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ, ಐಸೋಲೇಷನ್ನಲ್ಲಿದ್ದೇನೆ. ನನಗೆ ಕೊರೊನಾದ ಎಲ್ಲಾ ಲಕ್ಷಣಗಳಿವೆ, ನಿಮ್ಮ ಬಗ್ಗೆ ಕಾಳಜಿವಹಿಸಿ, ನನ್ನ ಸಂಪರ್ಕದಲ್ಲಿದ್ದರೆ ಟೆಸ್ಟ್ ಮಾಡಿಸಿಕೊಳ್ಳಿ" ಎಂದಿದ್ದಾರೆ.
"ಚಿಂತೆ ಮಾಡಿಕೊಳ್ಳುವಂತದ್ದು ಏನೂ ಇಲ್ಲ. ನಾನು ಚಿಕಿತ್ಸೆ ಪಡೆಯುತ್ತಿರುವೆ ಹಾಗೂ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ನಾನು ಮರಳಿ ಕೆಲಸಕ್ಕೆ ಬರುವನೆಂಬ ನಂಬಿಕೆ ಇದೆ. ನನಗೆ ಹೇಗೆ ಈ ವೈರಸ್ ತಗುಲಿತೋ ಗೊತ್ತಿಲ್ಲ. ನಾನು 15 ದಿನಗಳ ಕಾಲ ಶೂಟಿಂಗ್‌ನಿಂದ ದೂರ ಇರುತ್ತೇನೆ. ಧಾರಾವಾಹಿಯ ಸ್ಕ್ರಿಪ್ಟ್ನಲ್ಲಿ ಕೊಂಚ ಬದಲಾವಣೆ ತರಬಹುದು" ಎಂದಿದ್ದಾರೆ.
ಈ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕದ ಹುಡುಗಿ ಮಹತಿಯಾಗಿ ನಯನಾ ನಾಗರಾಜು ನಟಿಸಿದ್ದಾರೆ. ಗಿಣಿರಾಮ ಧಾರಾವಾಹಿ ಉತ್ತರ ಕರ್ನಾಟಕದ ಜನತೆಯ ಮನರಂಜಿಸಿದೆ. ನಯನಾ ಈ ಮೊದಲು ಪಾಪ ಪಾಂಡು ಹಾಗೂ 'ಮಂಗಳೂರು ಹುಡ್ಗಿ ಹುಬ್ಳಿ ಹುಡ್ಗ' ಧಾರಾವಾಹಿಗಳಲ್ಲಿ ನಟಿಸಿದ್ದರು.