ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ಗೀತ ಗೋವಿಂದಂ' ಸಿನಿಮಾ ಕೇಳಿದರೆ ಆ ಸಿನಿಮಾ ಹಾಡುಗಳನ್ನು ನಮಗೇ ಗೊತ್ತಿಲ್ಲದಂತೆ ಗುನುಗುವುದು ಖಂಡಿತ. ಸಿನಿಮಾ ಹಾಡುಗಳು, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಮಿಸ್ಟ್ರಿ ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
- " class="align-text-top noRightClick twitterSection" data="
">
ಇದೀಗ 'ಗೀತ ಗೋವಿಂದಂ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಅದೂ ಕೂಡಾ 'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ' ಹೆಸರಿನಲ್ಲಿ. ತೆಲುಗಿನ ಈ ಬ್ಲಾಕ್ಬಸ್ಟರ್ ಸಿನಿಮಾವನ್ನು ನೀವು ಇನ್ನೂ ನೋಡಿಲ್ಲವಾದರೆ ಇದೀಗ ಮನೆಯಲ್ಲೇ ಕುಳಿತು ಎಂಜಾಯ್ ಮಾಡಬಹುದು. ಈ ಮೂಲಕ ತೆಲುಗು ಚಿತ್ರರಂಗದ ಈ ಮುದ್ದಾದ ಜೋಡಿ ಕನ್ನಡಿಗರಿಗೂ ಮನರಂಜನೆ ನೀಡಲು ಮುಂದಾಗಿದೆ.
- " class="align-text-top noRightClick twitterSection" data="
">
ಇದೇ ಭಾನುವಾರ, ಅಂದರೆ ಜುಲೈ 26 ರಂದು ಸಂಜೆ 5 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ ಪ್ರಸಾರವಾಗಲಿದೆ. ಗೀತಾ ಆರ್ಟ್ಸ್ ಬ್ಯಾನರ್ ಮೂಲಕ ಅಲ್ಲು ಅರವಿಂದ್ ನಿರ್ಮಾಣದ ಈ ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದರು. 15 ಆಗಸ್ಟ್ 2018 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಒಳ್ಳೆ ಕಲೆಕ್ಷನ್ ಮಾಡಿ ಟಾಲಿವುಡ್ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಬಿಡುಗಡೆಯಾದ 12 ದಿನಗಳಲ್ಲಿ 102 ಕೋಟಿ ರೂಪಾಯಿ ಲಾಭ ಗಳಿಸಿತ್ತು.