ಮುಂಬೈ : ಸಿನಿಮಾ, ಒಟಿಟಿ ಮತ್ತು ಟಿವಿ ಮಾಧ್ಯಮಗಳಲ್ಲಿ ಗೌಹರ್ ಖಾನ್ ಕೆಲಸ ಮಾಡಿದ್ದಾರೆ. ಆ್ಯಕ್ಟ್ ಮಾಡೋದು ಅವರಿಗೆ ಮೊದಲಿನಿಂದಲೂ ಇಷ್ಟವಾದ್ರೂ, ರಿಯಾಲಿಟಿ ಶೋಗಳಲ್ಲಿ ಉತ್ತಮ ಅವಕಾಶಗಳು ಸಿಕ್ಕಿದವು. 2009ರಲ್ಲಿ ಝಲಕ್ ಧಿಕ್ಲಾ ಜಾ ಸೀಸನ್-3ನಲ್ಲಿ ಭಾಗವಹಿಸಿದ್ದರು.
ನಂತರ ಅವರು ದಿ ಖಾನ್ ಸಿಸ್ಟರ್ಸ್, ಬಿಗ್ಬಾಸ್ ಸೀಸನ್-7, ಫಿಯರ್ ಫ್ಯಾಕ್ಟರ್, ಖತ್ರೋನ್ ಕೆ ಕಿಲಾಡಿ 5 ಸೇರಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌಹರ್, ಆ್ಯಕ್ಟ್ ಮಾಡೋದು ಅಂದ್ರೆ ನನಗೆ ತುಂಬಾ ಇಷ್ಟ. ಆದರೆ, ರಿಯಾಲಿಟಿ ಶೋ ನನಗೆ ಮತ್ತೊಂದು ತೆರನಾದ ಅವಕಾಶ ಒದಗಿಸಿಕೊಟ್ಟಿವೆ.
ಕ್ಯಾಮೆರಾ ಮುಂದೆ ನಾನು ನಟಿಸುವಾಗ ಸಖತ್ ಎಂಜಾಯ್ ಮಾಡುತ್ತೇನೆ. ಆದರೆ, ರಿಯಾಲಿಟಿ ಶೋಗಳಲ್ಲಿ ಹಾಗೆ ಆಗುವುದಿಲ್ಲ ಎಂದರು. ಸೈಫ್ ಅಲಿ ಖಾನ್ ಮತ್ತು ಡಿಂಪಲ್ ಕಪಾಡಿಯಾ ಅಭಿನಯಿಸಿರುವ ವೆಬ್ ಸೀರೀಸ್ ‘ತಾಂಡವ್’ನಲ್ಲಿ ಗೌಹರ್ ನಟಿಸಿದ್ದಾರೆ.