ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಧಾರವಾಹಿ ‘ಬ್ರಹ್ಮಗಂಟು’ ಇದೀಗ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಧಾರವಾಹಿ ಗೀತಾ ಎಂಬ ಹೆಚ್ಚು ತೂಕವಿರುವ ಹುಡುಗಿಯ ಸುತ್ತ ಸುತ್ತುತ್ತದೆ. ಧಾರವಾಹಿಯಲ್ಲಿ ಅನೇಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಗೀತಾಳನ್ನು ಶೋಷಿಸುತ್ತಿದ್ದರೆ, ಮುಗ್ಧ ಗೀತಾ ಮಾತ್ರ ಎಲ್ಲರನ್ನೂ ಕ್ಷಮಿಸುವ ಗುಣದವಳು.
ಈ ಧಾರಾವಾಹಿ ಹಿಂದಿ ಧಾರಾವಾಹಿ 'ಬಡೋ ಬಹು' ಚಿತ್ರದ ರಿಮೇಕ್ ಆಗಿದ್ದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಹೆಣೆಯುವ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರವಾಹಿಯಲ್ಲಿ 'ಗುಂಡಮ್ಮ' ಪಾತ್ರವನ್ನು ಗಾಯಕಿ, ನಟಿ ಗೀತಾ ಭಾರತಿ ನಿರ್ವಹಿಸುತ್ತಿದ್ದಾರೆ. ಗುಂಡಮ್ಮ ಪಾತ್ರಕ್ಕಾಗಿ ಗೀತಾ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗೀತಾ ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿಯಾಗಿದ್ದರು.
ಧಾರಾವಾಹಿಯು ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ನಟ ಭರತ್ ಬೋಪಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧಾರಾವಾಹಿಯ ಇಂಟ್ರೊಡಕ್ಷನ್ ಕ್ಲಿಪ್ ಹಂಚಿಕೊಂಡಿದ್ದು, ವಿಡಿಯೋ ಜೊತೆಗೆ “ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು, ಸುರಕ್ಷಿತವಾಗಿರಿ” ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ನೋಡಿ ಇದೀಗ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.