ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕುಮಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ನವ್ಯಾ ಸ್ವಾಮಿ, ಸ್ವಯಂವರ ರಿಯಾಲಿಟಿ ಶೋ ಮೂಲಕ ಮನೆ ಮಾತಾದವರು.
![Rani Padmini Devi](https://etvbharatimages.akamaized.net/etvbharat/prod-images/kn-bng-04-ranipadminidevi-photo-ka10018_05082020150435_0508f_1596620075_217.jpg)
ಲಕುಮಿ ಧಾರಾವಾಹಿಯಲ್ಲಿ ನಟಿಸಿದ್ದ ನವ್ಯಾ ಸ್ವಾಮಿ ಮುಂದೆ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಾ ಪೇರು ಮೀನಾಕ್ಷಿ, ಆಮೆ ಕಥಾ ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿ ನಟನಾ ಛಾಪನ್ನು ಮೂಡಿಸಿದ್ದ ನವ್ಯಾ ಸ್ವಾಮಿ, ಇದೀಗ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ.
![Rani Padmini Devi](https://etvbharatimages.akamaized.net/etvbharat/prod-images/kn-bng-04-ranipadminidevi-photo-ka10018_05082020150435_0508f_1596620075_519.jpg)
ನವ್ಯಾ ಸ್ವಾಮಿ ಅಭಿನಯದ ಆಮೆ ಕಥಾ ಧಾರಾವಾಹಿ ಇದೀಗ ಕನ್ನಡ ಭಾಷೆಗೆ ಡಬ್ ಆಗಲಿದ್ದು, ಆ ಮೂಲಕ ನವ್ಯಾ ಅವರು ಮತ್ತೆ ಕನ್ನಡ ಭಾಷೆಯಲ್ಲಿ ಮಿಂಚಲಿದ್ದಾರೆ. ಆಮೆ ಕಥಾ ಧಾರಾವಾಹಿಯು ಕನ್ನಡ ಭಾಷೆಗೆ ಡಬ್ ಆಗುತ್ತಿದ್ದು, ರಾಣಿ ಪದ್ಮಿನಿ ದೇವಿ ಹೆಸರಿನಲ್ಲಿ ಪ್ರಸಾರ ಕಾಣಲಿದೆ. ಈಗಾಗಲೇ ರಾಣಿ ಪದ್ಮಿನಿ ದೇವಿ ಧಾರಾವಾಹಿಯ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಧಾರಾವಾಹಿ ಪ್ರಸಾರವಾಗುವುದನ್ನೇ ಕಾಯುತ್ತಿದ್ದಾರೆ.
![Rani Padmini Devi](https://etvbharatimages.akamaized.net/etvbharat/prod-images/kn-bng-04-ranipadminidevi-photo-ka10018_05082020150435_0508f_1596620075_60.jpg)
ನಾಯಕಿಯಾಗಿ ನವ್ಯಾ ಅಭಿನಯಿಸಿದ್ದರೆ, ನಾಯಕನಾಗಿ ರವಿಕೃಷ್ಣ ಅಭಿನಯಿಸಿದ್ದಾರೆ. ನಾಗಕನ್ನಿಕೆ, ರಾಧಾ ಕೃಷ್ಣ, ಮಹಾಭಾರತ, ದೃಷ್ಟಿ, ಗಣೇಶ, ಸಿಐಡಿ, ಮಹಾನಾಯಕ, ಓಂ ನಮಃ ಶಿವಾಯ, ಕಥೆಯ ರಾಜಕುಮಾರಿ, ಪರಮಾವತಾರಿ ಶ್ರೀಕೃಷ್ಣ ಹೀಗೆ ಸಾಲು ಸಾಲು ಡಬ್ಬಿಂಗ್ ಧಾರಾವಾಹಿಗಳು ಈಗಾಗಲೇ ಪ್ರಸಾರ ಕಂಡಿದ್ದು, ಆ ಸಾಲಿಗೆ ಹೊಸದಾಗಿ ರಾಣಿ ಪದ್ಮಿನಿ ದೇವಿ ಧಾರಾವಾಹಿ ಸೇರಲಿದೆ.
![Rani Padmini Devi](https://etvbharatimages.akamaized.net/etvbharat/prod-images/kn-bng-04-ranipadminidevi-photo-ka10018_05082020150435_0508f_1596620075_366.jpg)
ಆಮೆಕಥಾ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿರುವ ನವ್ಯಾ ಮತ್ತು ರವಿಕೃಷ್ಣ, ಲಾಕ್ಡೌನ್ ನಂತರ ಮತ್ತೆ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಆಗ ನವ್ಯಾರಿಗೆ ಕೊರೊನಾ ವೈರಸ್ ಆವರಿಸಿಕೊಂಡಿತ್ತು. ಇದರ ಜೊತೆಗೆ ನಾಯಕನಾಗಿ ನಟಿಸುತ್ತಿದ್ದ ರವಿಕೃಷ್ಣ ಅವರಿಗೂ ಕೊರೊನಾ ಬಂದಿತ್ತು. ಸದ್ಯ ಇಬ್ಬರು ಕೂಡ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.