ETV Bharat / sitara

ಈ ವಾರ ಡಬಲ್‌ ಎಲಿಮಿನೇಷನ್‌ ಸಾಧ್ಯತೆ: ಬಿಗ್​ ಬಾಸ್ ಮನೆಯಿಂದ ಇಂದು ಯಾರು ಔಟ್​?

ಬಿಗ್​ ಬಾಸ್ ಸ್ಪರ್ಧಿಗಳಾದ ಶಮಂತ್​, ರಾಜೀವ್​, ಪ್ರಶಾಂತ್​ ಸಂಬರ್ಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಎಲಿಮಿನೇಷನ್​ ತೂಗುಗತ್ತಿಯಲ್ಲಿ ಸಿಲುಕಿದ್ದಾರೆ. ಈ ವಾರ ಮನೆಯಿಂದ ಒಬ್ಬರು ಹೋಗ್ತಾರೋ ಅಥವಾ ಇಬ್ಬರು ಹೋಗ್ತಾರೋ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

author img

By

Published : Apr 11, 2021, 9:40 AM IST

ಬಿಗ್​ ಬಾಸ್ ಸ್ಪರ್ಧಿಗಳು
ಬಿಗ್​ ಬಾಸ್ ಸ್ಪರ್ಧಿಗಳು

ಬಿಗ್​ ಬಾಸ್ ಮನೆಯಿಂದ ಈಗಾಗಲೇ ಐವರು ಸ್ಪರ್ಧಿಗಳು ಹೊರ ಹೋದರೆ, ಮೂವರು ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗಲೇ ಆರನೇ ವಾರದ ಎಲಿಮಿನೇಷನ್ ಕೂಡ​ ಹತ್ತಿರವಾಗಿದೆ. 15 ಸ್ಪರ್ಧಿಗಳ ಪೈಕಿ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ.

ಹೌದು, ಈ ಕುರಿತು ಶುಭಾ ಕೂಡ ಮಾತನಾಡಿದ್ದರು. ಇಬ್ಬರು ಮನೆ ಒಳಗೆ ಬಂದಿದ್ದಾರೆ ಎಂದರೆ ಇಬ್ಬರು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಕೇಳಿ ದಿವ್ಯಾ ಹಾಗೂ ನಿಧಿ ಭಯಗೊಂಡಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಸುದೀಪ್ ನಿನ್ನೆಯ ಎಪಿಸೋಡ್ ಕೊನೆಯಲ್ಲಿ ಹೇಳಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಸ್ವತಃ ಸುದೀಪ್ ಅವರೇ ಡಬಲ್​ ನಾಮಿನೇಷನ್​ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಿಗ್​ ಬಾಸ್ ಸ್ಪರ್ಧಿಗಳು
ಬಿಗ್​ ಬಾಸ್ ಸ್ಪರ್ಧಿಗಳು

ಈ ವಾರ ಶಮಂತ್​, ಅರವಿಂದ್ ಕೆ.ಪಿ, ಪ್ರಶಾಂತ್​ ಸಂಬರ್ಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್​ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು. ಈ ಪೈಕಿ ನಿಧಿ ಸುಬ್ಬಯ್ಯ ಹಾಗೂ ಅರವಿಂದ್​ ಸೇಫ್​ ಆಗಿದ್ದಾರೆ ಎಂದು ಸುದೀಪ್​ ಘೋಷಣೆ ಮಾಡಿದರು. ಈಗ ಉಳಿದಿರುವ ಶಮಂತ್​, ರಾಜೀವ್​, ಪ್ರಶಾಂತ್​ ಸಂಬರ್ಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಇವರಲ್ಲಿ ಇಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗುತ್ತಿದೆ.

ಎಲಿಮಿನೇಟ್ ಆದವರನ್ನು ಹೊರತುಪಡಿಸಿ ಮನೆಯಲ್ಲಿ ಉಳಿಯುವ ಸ್ಪರ್ಧಿಗಳು 50 ದಿನ‌ ಪೂರೈಸುವುದು ಖಂಡಿತ. ಆದರೆ, ಈ ವಾರ ಮನೆಯಿಂದ ಒಬ್ಬರು ಹೋಗ್ತಾರೋ ಅಥವಾ ಇಬ್ಬರು ಹೋಗ್ತಾರೋ ಎಂಬ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.