ETV Bharat / sitara

ಬಿಗ್​ಬಾಸ್​ ಸೀಸನ್​​ 8ರಲ್ಲಿ ಸ್ಪರ್ಧಿಯಾಗಲಿದ್ದಾರಾ ಗುಂಡಮ್ಮ...?

'ಬ್ರಹ್ಮಗಂಟು' ಧಾರಾವಾಹಿ ಗುಂಡಮ್ಮ ಖ್ಯಾತಿಯ ಗೀತಾಭಾರತಿ ಭಟ್​​​​​​ ಈಬಾರಿ ಬಿಗ್​​​ಬಾಸ್​ ಮನೆಗೆ ಹೋಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯಕ್ಕೆ ಗೀತಾ ಧಾರಾವಾಹಿಯ ಮುಂದಿನ ಎಪಿಸೋಡ್​​​​ಗಳಿಗೆ ಈಗಲೇ ಚಿತ್ರೀಕರಣ ಮಾಡುತ್ತಿದ್ದಾರಂತೆ.

author img

By

Published : Feb 6, 2021, 1:47 PM IST

Geeta Bharati Bhat
ಗೀತಾಭಾರತಿ ಭಟ್​​​​​​

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಈಗಾಗಲೇ ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಒಂದಷ್ಟು ಹೆಸರುಗಳು ಕೂಡಾ ಕೇಳಿಬಂದಿವೆ. ಇವರಲ್ಲಿ ನಟಿ ಗೀತಾ ಭಾರತ್ ಭಟ್ ಕೂಡಾ ಬಿಗ್​​ಬಾಸ್​​​ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.

Geeta Bharati Bhat
ಕಿರುತೆರೆ ನಟಿ ಗೀತಾಭಾರತಿ ಭಟ್

ಗೀತಾ ಸದ್ಯಕ್ಕೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿ ಗೀತಾ ಆಗಿ ನಟಿಸುತ್ತಿದ್ದು ಬಿಗ್​​​ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಇನ್ಮುಂದೆ ಗೀತಾ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ವಾ ಎಂದು ಅನುಮಾನ ಕಾಡುವುದು ಸಹಜ. ಆದರೆ ಗೀತಾ ಧಾರಾವಾಹಿಯನ್ನು ಕೂಡಾ ಬಿಡುವುದಿಲ್ಲವಂತೆ. ಇದು ಹೇಗೆ ಸಾಧ್ಯ ಅಂತೀರಾ..? ಬಿಗ್​​ಬಾಸ್​​​​ಗೆ ಹೋಗುವ ಸಲುವಾಗಿ ಗೀತಾ ಧಾರಾವಾಹಿಯ ಮುಂಬರುವ ಎಪಿಸೋಡ್​​​​​​ಗಳಲ್ಲಿ ಹಗಲು ರಾತ್ರಿ ಎನ್ನದೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಗೀತಾ ಬಿಗ್​​​ಬಾಸ್​​ಗೆ ಹೋಗಲಿದ್ದಾರಾ ಇಲ್ಲವಾ ಎಂಬುದು ಕಾರ್ಯಕ್ರಮದ ಓಪನಿಂಗ್​​​​​​​​​​​ನಲ್ಲಿ ತಿಳಿಯಲಿದೆ.

Geeta Bharati Bhat
'ಬ್ರಹ್ಮಗಂಟು' ಖ್ಯಾತಿಯ ನಟಿ

ಇದನ್ನೂ ಓದಿ: ಆ ವಿಶೇಷ ದಿನದಂದು ಅಭಿಮಾನಿಗಳಿಗೆ ಉಡುಗೊರೆ ನೀಡಲು ಮುಂದಾದ 'ರಾಧೇಶ್ಯಾಮ್' ತಂಡ

ಹಿಂದಿಯ ಬಡೋ ಬಹು ರೀಮೇಕ್ ಆಗಿರುವ ಬ್ರಹ್ಮಗಂಟು ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಗೀತಾ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಭರತ್ ಬೋಪಣ್ಣ, ಸಂಜನಾ ಚಿದಾನಂದ್, ಟಿ. ಎಸ್. ನಾಗಾಭರಣ, ಶೋಭಿತಾ ಶಿವಣ್ಣ, ಸ್ವಾತಿ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಧಾರಾವಾಹಿಯನ್ನು ಶ್ರುತಿ ನಾಯ್ಡ ನಿರ್ಮಿಸುತ್ತಿದ್ದಾರೆ.

Geeta Bharati Bhat
ಬಿಗ್​ಬಾಸ್​ ಸೀಸನ್​​ 8 ಸ್ಪರ್ಧಿಯಾಗಿ ಹೋಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.