ಬಿಗ್ ಬಾಸ್ ಕನ್ನಡ ಸೀಸನ್ 8 ಗ್ರ್ಯಾಂಡ್ ಫಿನಾಲೆಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ವಾರ ದಿವ್ಯಾ ಸುರೇಶ್ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ.
ಈ ವಾರ ಬಿಗ್ಬಾಸ್ ಪ್ರಯಾಣದ ಅನುಭವವನ್ನು ದೂರವಾಣಿಯಲ್ಲಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ. ಟೆಲಿಫೋನ್ ಬೂತ್ ಮೂಲಕವೇ ಸಂದೇಶಗಳನ್ನು ರವಾನಿಸಿ, ಟಾಸ್ಕ್ಗಳನ್ನು ಆಡಿಸಿದ್ದಾರೆ. ಅದರಂತೆ ಈ ವಾರವೂ ಕಳಪೆ ಮತ್ತು ಅತ್ಯುತ್ತಮ ಪಟ್ಟ ನೀಡಲಾಗಿದ್ದು, ಕಳಪೆಗೆ ದಿವ್ಯಾ ಸುರೇಶ್ ಹೆಸರು ಹಾಗೂ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಶಾಂತ್ ಸಂಬರಗಿ ಆಯ್ಕೆ ಮಾಡಲಾಗಿದೆ.
![bigg boss](https://etvbharatimages.akamaized.net/etvbharat/prod-images/kn-bng-01-bbk-kalape-divyas-photo-ka10018_31072021100217_3107f_1627705937_48.jpg)
ಪ್ರತಿ ವಾರ ಬಿಗ್ ಬಾಸ್ ಮನೆಯಲ್ಲಿ ಕಳಪೆ ವಿಚಾರ ಬಂದಾಗ ಏನಾದರೊಂದು ತಕರಾರು ಇದ್ದೇ ಇರುತ್ತದೆ. ಕಳಪೆ ಪಟ್ಟ ಕೊಟ್ಟಿದ್ದನ್ನು ವಿರೋಧಿಸಿ ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಮಾಡಿದ ಧರಣಿಯನ್ನು ವೀಕ್ಷಕರು ಯಾರೂ ಮರೆಯಲು ಸಾಧ್ಯವಿಲ್ಲ. ಈ ವಾರ ದಿವ್ಯಾ ಸುರೇಶ್‌ಗೆ ಕಳಪೆ ಪಟ್ಟ ಸಿಕ್ಕಿದೆ. ಕಳಪೆ ಪಟ್ಟ ಸಿಕ್ಕಿದ್ದಕ್ಕೆ ದಿವ್ಯಾ ಸುರೇಶ್‌ಗೆ ಎಷ್ಟು ಬೇಜಾರು ಆಗಿದೆಯೋ ಅದಕ್ಕಿಂತ ಜಾಸ್ತಿ ಪ್ರಶಾಂತ್ ಸಂಬರಗಿಗೆ ಬೇಸರ ಆಗಿರುವಂತೆ ಕಾಣುತ್ತಿದೆ.
![bigg boss](https://etvbharatimages.akamaized.net/etvbharat/prod-images/kn-bng-01-bbk-kalape-divyas-photo-ka10018_31072021100217_3107f_1627705937_130.jpg)
ಹೌದು, ಈ ವಾರ ಮನೆಯಲ್ಲಿ ಯಾರೂ ಕಳಪೆ ಇಲ್ಲ. ಯಾರೂ ಉತ್ತಮ ಇಲ್ಲ ಎಂದು ಮನೆಯವರೇ ತೀರ್ಮಾನ ಮಾಡಿಕೊಂಡರು. ಆದರೆ, ನಿಯಮ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಬಿಗ್ ಬಾಸ್ ಆದೇಶ ನೀಡಿದರು. ಅದರಂತೆ, ಈ ವೀಕ್ ಅರವಿಂದ್ ಕೆಪಿ ಮತ್ತು ದಿವ್ಯಾ ಸುರೇಶ್ ನಡುವೆ ಕಳಪೆ ಸ್ಥಾನಕ್ಕೆ ಸ್ಪರ್ಧೆ ಇತ್ತು. ಅರವಿಂದ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದರು. ಮಂಜು ಸಹ ದಿವ್ಯಾ ಸುರೇಶ್ ಹೆಸರನ್ನು ಕಳಪೆಗೆ ಸೂಚಿಸಿದರು. ಮೊದಲಿಗೆ ನಾನೇ ಕಳಪೆ ಎಂದು ಹೇಳಿದ್ದ ದಿವ್ಯಾ ಸುರೇಶ್, ಮಂಜಾ ನೀನು ನನಗೆ ಕಳಪೆ ಹಾಕಿದ್ದಿಯಲ್ಲಾ ಎಂದು ವಾದಕ್ಕೆ ಇಳಿದರು. ಇತ್ತ ಕಳಪೆಗೆ ಅರವಿಂದ್ ಹೆಸರನ್ನು ಮಂಜು ಪಾವಗಡ ಹೇಳಬೇಕಿತ್ತು ಎಂದು ಪ್ರಶಾಂತ್, ದಿವ್ಯಾ ಸುರೇಶ್ ಹಾಗೂ ಶುಭಾ ಬಳಿ ಪ್ರಸ್ತಾಪಿಸಿದರು.