ಬೆಳಗ್ಗೆ ತಿಂಡಿ ತಿನ್ನುವ ವೇಳೆ ನಾನು ಮನೆಯಿಂದ ಹೊರ ಹೋದಾಗ ಸಂದರ್ಶನಗಳಲ್ಲಿ ಫೇಕ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದೇನೆ. ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ಗೆ ತಿಂಗಳು 30 ಸಾವಿರ ರೂ. ಸಂಬಳ ಹಾಗೂ ಮನೆಯನ್ನು ಕೊಟ್ಟಿದ್ದೇನೆ ಎಂದು ಪ್ರಶಾಂತ್ ಸಂಬರಗಿ ಹೇಳುತ್ತಾರೆ. ಈ ವಿಚಾರವಾಗಿ ದಿವ್ಯಾ ಸುರೇಶ್ ಕಣ್ಣೀರು ಹಾಕುತ್ತಾ ಪ್ರಿಯಾಂಕ ಬಳಿ ತಮ್ಮ ನೋವು ತೋಡಿಕೊಂಡರು. ಇದಕ್ಕೆ ಕಾರಣವಿತ್ತು..
ನಿನ್ನೆ ನಡೆದ ಘಟನೆಯಿಂದ ಹೊರಬಂದು ಪಾಸಿಟಿವ್ ಆಗಿ ಇರಲು ಪ್ರಯತ್ನಿಸುತ್ತಿದ್ದರೂ ಕಣ್ಣೀರಿಡುವಂತೆ ಮಾಡುತ್ತಿದ್ದಾರೆ. ಚುಚ್ಚುಮಾತುಗಳಿಂದ ನೋವು ಕೊಡುತ್ತಿದ್ದಾರೆ ಎಂದು ದಿವ್ಯಾ ಸುರೇಶ್ ದುಃಖಿತರಾದರು.
ಇಷ್ಟೆಲ್ಲಾ ನಡೆದರೂ ಮಂಜು ಪಾವಗಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತಮ್ಮ ಪಾಡಿಗೆ ತಾವಿದ್ದರು. ಇದಕ್ಕೂ ಮುನ್ನ ನಿಧಿ ಸುಬ್ಬಯ್ಯ ಬಳಿ ಎಮೋಷನಲ್ ಆಗಿ ನಿನ್ನೆ ಘಟನೆ ಸಂಬಂಧ ಮಂಜು ಕಣ್ಣೀರು ಹಾಕಿದರು.
ಅರವಿಂದ್ ಹಾಗೂ ಇತರ ಸದಸ್ಯರು ಮಂಜು ಅವರಿಗೆ ನಿನ್ನೆ ಆಡಿದ ಮಾತಿನ ಬಗ್ಗೆ ಮನವರಿಕೆ ಮಾಡಿದರು. ಪದ ಬಳಕೆ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅರವಿಂದ್, ಮಂಜು ಪಾವಗಡ ಅವರಿಗೆ ಕಿವಿಮಾತು ಹೇಳಿದರು.