ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿಯೂ ಒಂದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಇದೀಗ ಬಹು ದೊಡ್ಡ ಬದಲಾವಣೆಯಾಗಿದೆ.
ಹೌದು. ಅಪ್ಪು ಬದಲಾಗಿ ಬೇರೊಬ್ಬರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಆ ನಿರೂಪಕಿ ಬೇರಾರೂ ಅಲ್ಲ, ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್. ಹೌದು, ಪುನೀತ್ ರಾಜ್ ಕುಮಾರ್ ಅವರ ಜಾಗದಲ್ಲಿ ಇದೀಗ ರಚಿತಾ ರಾಮ್ ಕುಳಿತುಕೊಂಡಿದ್ದಾರೆ. ಪ್ರತಿ ವಾರ ಹಾಟ್ ಸೀಟ್ನಲ್ಲಿ ಕುಳಿತವರಿಗೆ ಪವರ್ ಸ್ಟಾರ್ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ, ಈ ಬಾರಿಯ ವಿಶೇಷ ಅಂದ್ರೆ ಅಪ್ಪು ಹಾಟ್ ಸೀಟ್ನಲ್ಲಿ ಕುಳಿತುಕೊಳ್ಳಲಿದ್ದಾರೆ. ಅವರಿಗೆ ಪ್ರಶ್ನೆಗಳನ್ನು ಕೇಳಲು ರಚಿತಾ ರಾಮ್ ತಯಾರಾಗಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.
- " class="align-text-top noRightClick twitterSection" data="
">
ಅಷ್ಟೇ ಅಲ್ಲದೆ ಹಾಟ್ ಸೀಟ್ನಲ್ಲಿ ಕುಳಿತುಕೊಂಡಿರುವ ಪವರ್ ಸ್ಟಾರ್ ಪುನೀತ್ ಅವರು ಡ್ಯಾನ್ಸ್ ಕೂಡಾ ಮಾಡಿದ್ದಾರೆ. 'ಅಪ್ಪು' ಸಿನಿಮಾದ 'ತಾಲಿಬಾನ್ ಅಲ್ವೇ ಅಲ್ಲಾ...' ಹಾಡಿಗೆ ರಚಿತಾ ರಾಮ್ ಅವರ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ಇನ್ನು ಪುನೀತ್ ಹಾಟ್ ಸೀಟಿನಲ್ಲಿ ಕುಳಿತಿರುವುದು ಖುಷಿ ತಂದರೆ, ಬೇಸರದ ಸಂಗತಿ ಎಂದ್ರೆ, ಕೋಟ್ಯಾಧಿಪತಿ ಕೊನೆಯ ಹಂತಕ್ಕೆ ಬಂದಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.