ಕನ್ನಡ ಕಿರುತೆರೆ ಲೋಕದ ಡ್ಯಾನ್ಸ್ ರಿಯಾಲಿಟಿ ಷೋಗಳಲ್ಲಿ ಹೊಸ ಛಾಪು ಮೂಡಿಸಿರುವ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ತನ್ನದೇ ಆದ ವೀಕ್ಷಕರನ್ನು ಒಳಗೊಂಡಿದೆ. ಪ್ರತಿ ಸೀಸನ್ನಲ್ಲೂ ಸ್ಪರ್ಧಿಗಳು ವಿಭಿನ್ನ ಪರಿಕಲ್ಪನೆಯೊಂದಿಗೆ ಹೆಜ್ಜೆ ಹಾಕಿ ಜಡ್ಜ್ಗಳ, ವೀಕ್ಷಕರ ಮನ ಗೆದ್ದಿದ್ದಾರೆ.
![Yukti naidu, Tejas](https://etvbharatimages.akamaized.net/etvbharat/prod-images/kn-bng-01-dkd-finale-photo-ka10018_31122019183058_3112f_1577797258_0.jpg)
ಈ ಬಾರಿಯ ಫ್ಯಾಮಿಲಿ ವಾರ್ನ ಫೈನಲ್ ಅದ್ದೂರಿಯಾಗಿ ಮೂಡಿಬಂದಿದೆ. ಈಗಾಗಲೇ 22 ವಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಕಾರ್ಯಕ್ರಮ 13 ಜೋಡಿಯೊಂದಿಗೆ ಆರಂಭವಾಗಿತ್ತು. ನಂತರ ಕಾರ್ಯಕ್ರಮದ ನಿಯಮಾನುಸಾರ 20 ಸುತ್ತುಗಳ ಬಳಿಕ 10 ಜೋಡಿಗಳ ನಡುವೆ ನೃತ್ಯ ಸ್ಪರ್ಧೆ ಮುಂದುವರೆಯುತ್ತಾ ಬಂತು. ಕಳೆದ ಸೆಮಿಫೈನಲ್ನಲ್ಲಿ 10 ಜೋಡಿಗಳ ಪೈಕಿ, 5 ಜೋಡಿಗಳು ಅಂದರೆ ಅನೂಪ್ ಹಾಗೂ ದಿಂಪಿನ, ಪ್ರೇಕ್ಷಿತ್ ಹಾಗೂ ಅನ್ವಿಷ, ತೇಜಸ್ ಹಾಗೂ ಯುಕ್ತಿನಾಯ್ಡು (ಪ್ರಣತಿ), ವಿವೇಕ್ ಹಾಗೂ ಹಿರಣ್ಮಯಿ ಮತ್ತು ಅದಿತಿ ಗ್ರಾಂಡ್ ಫಿನಾಲೆ ವೇದಿಕೆಯನ್ನು ಏರಿದ್ದಾರೆ. ಇವರ ಪೈಕಿ ಪ್ರಣತಿ ಅಲಿಯಾಸ್ ಯುಕ್ತಿ ನಾಯ್ಡು, ಕೈ ನೋವಿದ್ದರೂ ಪ್ಲಾಸ್ಟರ್ ಹಾಕಿಕೊಂಡು ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಮನಗೆದ್ದಿರುವುದು ವಿಶೇಷ. ಈ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಕೋಟೆ ನಾಡು ಚಿತ್ರದುರ್ಗದ ಮಹಾ ಪ್ರೇಕ್ಷರರ ನಡುವೆ ನಡೆದಿದ್ದು, ಕಾರ್ಯಕ್ರಮ ಇಂದು ಸಂಜೆ 6.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
![Telecast in Zee kannada](https://etvbharatimages.akamaized.net/etvbharat/prod-images/kn-bng-01-dkd-finale-photo-ka10018_31122019183058_3112f_1577797258_760.jpg)