ETV Bharat / sitara

ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕರಾವಳಿ ಕುವರಿ ನಿಖಿತಾ - ಸತ್ಯಂ ಶಿವಂ ಸುಂದರಂ

ನಿಖಿತಾಗೆ ಬಾಲ್ಯದಿಂದಲೂ ನಟನೆಯ ಮೇಲೆ ವಿಶೇಷ ಆಸಕ್ತಿ. 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರನ ಪ್ರೇಯಸಿ ಟೀನಾಳಾಗಿ ನಟಿಸುವ ಮೂಲಕ ನಟನಾ ಬದುಕು ಆರಂಭಿಸಿದರು. ಸದ್ಯ ಗಿಣಿರಾಮ ಧಾರಾವಾಹಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ.

nikitha
nikitha
author img

By

Published : May 19, 2021, 3:14 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾಣಿಸಿಕೊಂಡಿರುವ ನಿಖಿತಾ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯವರು. ಎಳವೆಯಿಂದಲೂ ಸಿನಿಮಾ, ಸೀರಿಯಲ್​ಗಳನ್ನು ತುಂಬಾ ಇಷ್ಟ ಪಡುತ್ತಿದ್ದ ನಿಖಿತಾ ಮುಂದೊಂದು ದಿನ ತಾನು ನಟಿಯಾಗಬೇಕು ಎಂದು ಅಂದುಕೊಂಡಿದ್ದರು.

ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದು ಹೆಜ್ಜೆ ಮುಂದಿದ್ದ ನಿಖಿತಾ ನಾಟಕಗಳಿಗೆ ಬಣ್ಣ ಹಚ್ಚಿದ್ದೇ ಹೆಚ್ಚು. ಎಂಸಿಎ ಮುಗಿಸಿರುವ ನಿಖಿತಾಗೆ ಬಾಲ್ಯದಿಂದೂ ನಟನೆಯ ಮೇಲೆ ವಿಶೇಷ ಆಸಕ್ತಿ ಇದ್ದಿದ್ದರಿಂದ ಬದುಕು ರೂಪಿಸಲು ಬಣ್ಣದ ಬದುಕು ಆರಿಸಿಕೊಂಡ ಈಕೆ ಅದಕ್ಕಾಗಿ ಮುಂದೆ ಆಡಿಷನ್​ಗಳನ್ನು ಅಟೆಂಡ್ ಮಾಡತೊಡಗಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ' ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರನ ಪ್ರೇಯಸಿ ಟೀನಾಳಾಗಿ ನಟಿಸುವ ಮೂಲಕ ನಟನಾ ಬದುಕು ಆರಂಭಿಸಿದರು. ಸದ್ಯ ಗಿಣಿರಾಮ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಿಖಿತಾ ದೊರ್ತೋಡಿ ಭರತ ಬಾಹುಬಲಿ ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ.

ಇನ್ನು ನಟನೆಯ ಹೊರತಾಗಿ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಚೆಲುವೆ, ಝರ್ಟಾನ್ ಮೇಕಪ್ ಸ್ಟುಡಿಯೋ ,ಎಂ.ಜೆ ಗಾಡ್ಜಿಯಸ್ ಮೇಕಪ್ ಸ್ಟುಡಿಯೋ ಮಾಡೆಲಿಂಗ್ ಶೋಗಳಲ್ಲಿ ಭಾಗಿಯಾಗಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಪ್ರಕೃತಿ ಹೇರ್ ಆಯಿಲ್ , ಕಾರ್ನ್ ಕುಕಿಂಗ್ ಆಯಿಲ್​ನ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.