ETV Bharat / sitara

13 ವರ್ಷಗಳ ನಂತರ ಮತ್ತೆ ಪ್ರಸಾರವಾಗಲಿದೆ 'ಡ್ಯಾಡಿ ನಂ 1' - Daddy No 1 reality show

ತಂದೆ ಮಕ್ಕಳ ನಡುವಿನ ಬಾಂಧವ್ಯದ ಕುರಿತಾದ ಡ್ಯಾಡಿ ನಂ 1 ಕಾರ್ಯಕ್ರಮ 13 ವರ್ಷಗಳ ನಂತರ ಮತ್ತೆ ಪ್ರಸಾರವಾಗುತ್ತಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಆಡಿಷನ್ ನಡೆಯುತ್ತಿದ್ದು ಈ ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬುದನ್ನು ವಾಹಿನಿ ಇನ್ನೂ ರಿವೀಲ್ ಮಾಡಿಲ್ಲ.

Daddy no 1
ಡ್ಯಾಡಿ ನಂ 1
author img

By

Published : Feb 12, 2021, 7:10 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾಡಿ ನಂ 1 ಗೇಮ್ ಶೋ ವಿಭಿನ್ನ ಶೈಲಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ಇದೀಗ ಬರೋಬ್ಬರಿ 13 ವರ್ಷಗಳ ನಂತರ 'ಡ್ಯಾಡಿ ನಂ 1' ಗೇಮ್ ಶೋ ಮರಳಿ ಬರಲಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋಗಾಗಿ ಸದ್ಯದಲ್ಲೇ ಕರ್ನಾಟಕದ ವಿವಿಧೆಡೆ ಆಡಿಷನ್​​ ನಡೆಯಲಿದೆ.

ಇದನ್ನೂ ಓದಿ: ಬಾಲಿವುಡ್​ ನಟಿಯರ ಮುಂಬೈ ಸುತ್ತಾಟ ಕ್ಯಾಮರಾದಲ್ಲಿ ಸೆರೆ: ವಿಡಿಯೋ

13 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಈ ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ನಟರಂಗ ಮಾಡಿದ್ದರು. ಈ ಶೋ ನಲ್ಲಿ ತಂದೆಮಕ್ಕಳೇ ಕೇಂದ್ರ ಬಿಂದು. ತಂದೆ ಮಕ್ಕಳ ನಡುವಿನ ಬಾಂಧವ್ಯದ ಕುರಿತಾಗಿರುವ ಈ ಗೇಮ್ ಶೋನಲ್ಲಿ 7-12 ವರ್ಷದವರೆಗಿನ ಮಕ್ಕಳಿಗೆ ಭಾಗವಹಿಸುವ ಅವಕಾಶವಿದೆ. ಆದರೆ ಆಡಿಷನ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಸಂಚಿಕೆಗಳು ಪ್ರಿಲಿಮನರಿ ಸುತ್ತುಗಳಾಗಿದ್ದು ಅದರಲ್ಲಿ 4- 5 ತಂಡಗಳು ಸ್ಪರ್ಧಿಸುತ್ತವೆ. ನಂತರ ಅವುಗಳು ಕ್ವಾರ್ಟರ್ ಫೈನಲ್​​ಗೆ ಆಯ್ಕೆಯಾಗುತ್ತದೆ. ಹಲವು ಸುತ್ತುಗಳ ನಂತರ ಉತ್ತಮ ತಂದೆ-ಮಕ್ಕಳಿಗೆ ಪ್ರಶಸ್ತಿ ನೀಡಲಾಗುತ್ತದೆ.ಒಟ್ಟಿನಲ್ಲಿ ಈ ಶೋ, ತಂದೆ ಮಕ್ಕಳ ಸಂಬಂಧವನ್ನು ಅರಿಯಲು ಸಹಾಯ ಮಾಡುತ್ತದೆ. ಈಗಾಗಲೇ ಹೊಸ ಸೀಸನ್​​​​​​​ಗೆ ಆಡಿಷನ್ ನಡೆಯುತ್ತಿದ್ದು ಈ ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬುದನ್ನು ವಾಹಿನಿ ಇನ್ನೂ ರಿವೀಲ್ ಮಾಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.