ETV Bharat / sitara

ಸೂಪರ್ ಸ್ಟಾರ್ ವೇದಿಕೆಯಲ್ಲಿ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮೋಡಿ! - ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಇತ್ತಿಚಿನ ಸುದ್ದಿ

ವೇದಾ ಅವರು ಈ ಶೋನಲ್ಲಿ ಹಲವು ಆಟಗಳನ್ನು ಆಡಿದ್ದಾರೆ. ಜೊತೆಗೆ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುವರ್ಣ ಸೂಪರ್ ಸ್ಟಾರ್ ಶೋ ಕುಟುಂಬ ಹಾಗೂ ವೃತ್ತಿ ಬದುಕನ್ನು ನಿಭಾಯಿಸುವ ಸಾಧಕಿಯರಿಗೆ ಮೀಸಲಾಗಿದೆ..

cricketer veda krishnamurthy
ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ
author img

By

Published : Feb 26, 2021, 11:39 AM IST

Updated : Feb 26, 2021, 1:29 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾದ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಲಿನಿ ಸತ್ಯನಾರಾಯಣ್ ಅವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿ ಬರುತ್ತಿರುವ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ.

ವೇದಾ ಕೃಷ್ಣಮೂರ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ಈ ಸಂತಸ ಹಂಚಿಕೊಂಡಿದ್ದಾರೆ."ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಉತ್ತಮ ಸಮಯ ಕಳೆದೆ. ತುಂಬಾ ಸಂತಸವಾಯಿತು‌‌. ವಂದನಾ ರಾಜ್ ಈ ಔಟ್ ಫಿಟ್ ಡಿಸೈನ್ ಮಾಡಿದ್ದಕ್ಕೆ ಧನ್ಯವಾದ" ಎಂದು ಬರೆದು ಕೊಂಡಿದ್ದಾರೆ.

ವೇದಾ ಅವರು ಈ ಶೋನಲ್ಲಿ ಹಲವು ಆಟಗಳನ್ನು ಆಡಿದ್ದಾರೆ. ಜೊತೆಗೆ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುವರ್ಣ ಸೂಪರ್ ಸ್ಟಾರ್ ಶೋ ಕುಟುಂಬ ಹಾಗೂ ವೃತ್ತಿ ಬದುಕನ್ನು ನಿಭಾಯಿಸುವ ಸಾಧಕಿಯರಿಗೆ ಮೀಸಲಾಗಿದೆ.

ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಾಮಾನ್ಯ ಮಹಿಳೆಯರ ಹೊರತಾಗಿ ಐಂದ್ರಿತಾ ರೇ, ನೇಹಾ ಗೌಡ, ವೈಷ್ಣವಿ, ಇಶಿತಾ ವರ್ಷ, ಸ್ವಪ್ನಾ ದೀಕ್ಷಿತ್, ಮಯೂರಿ ಕ್ಯಾತಾರಿ, ವನಿತಾ ವಾಸು, ರೇಖಾ ಜೊತೆಗೆ ಕನ್ನಡ ಸಿನಿ ಹಾಗೂ ಕಿರುತೆರೆಯ ಕಲಾವಿದರು ಈಗಾಗಲೇ ಭಾಗವಹಿಸಿದ್ದಾರೆ.

Last Updated : Feb 26, 2021, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.