ETV Bharat / sitara

ಸಿಎಂ ಯಡಿಯೂರಪ್ಪ ಪ್ರತಿದಿನ ತಪ್ಪದೆ ನೋಡುವ ಧಾರಾವಾಹಿ ಯಾವುದು...? - Mahabharata serial telecast in Star suvarna

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಮಹಾಭಾರತ' ಡಬ್ಬಿಂಗ್ ಧಾರಾವಾಹಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿದಿನ ತಪ್ಪದೆ ನೋಡುತ್ತಾರಂತೆ. ಈ ಧಾರಾವಾಹಿ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

CM Yadiyurappa like Mahabharata serial
ಮಹಾ ಭಾರತ
author img

By

Published : Jun 19, 2020, 2:04 PM IST

ಕನ್ನಡ ಕಿರುತೆರೆಗೆ ಕೂಡಾ ಇದೀಗ ಡಬ್ಬಿಂಗ್​​ ಧಾರಾವಾಹಿಗಳು ಕಾಲಿಟ್ಟಿದ್ದು ಕಳೆದ ಒಂದು ತಿಂಗಳಿಂದ ಎಲ್ಲಾ ಮನರಂಜನಾ ವಾಹಿನಿಗಳಲ್ಲಿ ಹೊಸ ಹೊಸ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರಾವಾಹಿಗಳಲ್ಲಿ 'ಮಹಾಭಾರತ' ಕೂಡಾ ಒಂದು. ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಜನಸಾಮಾನ್ಯರು ಮಾತ್ರವಲ್ಲ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕೂಡಾ 'ಮಹಾಭಾರತ' ಧಾರಾವಾಹಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಈ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ರಿಂದ 8.30 ವರೆಗೆ ಒಂದೂವರೆ ಗಂಟೆಗಳ ಕಾಲ ಪ್ರಸಾರವಾಗುತ್ತಿದೆ.

CM Yadiyurappa like Mahabharata serial
'ಮಹಾಭಾರತ' ಧಾರಾವಾಹಿ ವೀಕ್ಷಿಸುತ್ತಿರುವ ಸಿಎಂ ಯಡಿಯೂರಪ್ಪ

ಈ ಧಾರಾವಾಹಿಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​​​. ಯಡಿಯೂರಪ್ಪ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಜನರಿಗೆ ಜೀವನದಲ್ಲಿ ಮೌಲ್ಯಗಳು ತುಂಬಾ ಮುಖ್ಯ. ಆ ಮೌಲ್ಯಗಳನ್ನು 'ಮಹಾಭಾರತ' ಧಾರಾವಾಹಿ ಜನರಿಗೆ ಹೇಳಿಕೊಡುತ್ತಿದೆ. ಧಾರಾವಾಹಿ ಆರಂಭವಾದಾಗಿನಿಂದ ತಪ್ಪದೇ ನೋಡುತ್ತಿದ್ದು ನಾನೂ ಕೂಡಾ ಈ ಧಾರಾವಾಹಿಯ ಅಭಿಮಾನಿಯಾಗಿದ್ದೇನೆ. ಅದರಲ್ಲೂ ನನಗೆ ಶ್ರೀಕೃಷ್ಣನ ಪಾತ್ರ ಎಂದರೆ ಬಹಳ ಇಷ್ಟ. ಶ್ರೀಕೃಷ್ಣನ ಮಾತುಗಳು, ಶ್ರೀಕೃಷ್ಣನ ಬೋಧನೆಗಳು ನಮ್ಮೆಲ್ಲರ ಜೀವನಕ್ಕೆ ಸಂಬಂಧಿಸಿದ್ದಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.