ಉದಯ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ 'ಚಿಣ್ಣರ ಚಿಲಿಪಿಲಿ' ಕೂಡಾ ಒಂದು. ಈ ಕಾರ್ಯಕ್ರಮದಲ್ಲಿ ಮುದ್ದು ಮುದ್ದಾಗಿ ಮಾತನಾಡುವ ಮಕ್ಕಳನ್ನು ನೋಡುವುದೇ ಒಂದು ಖುಷಿ. ಪಾಪಾ ಪಾಂಡು ಧಾರಾವಾಹಿ ಮೂಲಕ ಖ್ಯಾತರಾಗಿದ್ದ ಪಾಚು ಖ್ಯಾತಿಯ ಶಾಲಿನಿ ಮೊದಲು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈಗ ಉಮಾಶ್ರೀ ಇದೇ ಕಾರ್ಯಕ್ರಮದ ಹೊಣೆ ಹೊತ್ತಿದ್ದಾರೆ.

ಜನವರಿ 5ರಿಂದ ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಕೂಡಾ ಬಿಡುಗಡೆಯಾಗಿದ್ದು, ಉಮಾಶ್ರೀ ಯಂಗ್ ಲುಕ್ನಲ್ಲಿ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರೊಂದಿಗೆ ನಟಿಸಿರುವ ಉಮಾಶ್ರೀ ಬಹುಮುಖ ಪ್ರತಿಭೆ. ನಟನೆ ಜೊತೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಉಮಾಶ್ರೀ, ಈಗಾಗಲೇ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಪುಟ್ಮಲ್ಲಿಯಾಗಿ ಬಂದಿರುವ ಉಮಾಶ್ರೀ, ಇದೀಗ ಮೊದಲ ಬಾರಿಗೆ ನಿರೂಪಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯಲು ಬರುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಉಮಾಶ್ರೀ ಮಕ್ಕಳೊಂದಿಗೆ ಮಕ್ಕಳಂತಾಗಿ ಬೆರೆಯಲಿದ್ದಾರೆ.
- " class="align-text-top noRightClick twitterSection" data="">

ಈ ಬಾರಿಯ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವಿದೆ. ಮಾತುಗಾರಿಕೆಯಿಂದಲೇ ಫೇಮಸ್ ಆಗಿರುವ, ಈಗಾಗಲೇ ನೂರಕ್ಕೂ ಹೆಚ್ಚು ಸ್ಟೇಜ್ ಶೋಗಳನ್ನು ನೀಡಿ ಯಶಸ್ವಿಯಾಗಿರುವ ಡಿಂಕು ಮತ್ತು ಇಂದುಶ್ರೀ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಮಜಾ ನೀಡಲು ಬರುತ್ತಿದ್ದಾರೆ. 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮದಲ್ಲಿ 3-6 ವರ್ಷದ ಮಕ್ಕಳು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿಮ್ಮ ಮಕ್ಕಳು ಭಾಗವಹಿಸಬೇಕೆಂಬ ಆಸೆಯಿದ್ದರೆ ತಪ್ಪದೇ ಆಡಿಶನ್‌ನಲ್ಲಿ ಭಾಗವಹಿಸಿ. ಒಂದು ಗಂಟೆಯ ಈ ಕಾರ್ಯಕ್ರಮ ಎಲ್ಲರಿಗೂ ಮನರಂಜನೆ ನೀಡುವುದಂತೂ ನಿಜ.
