ಕೊರೊನಾ ವೈರಸ್ನಿಂದ ಉಂಟಾದ ಸಮಸ್ಯೆಗಳು ಒಂದಲ್ಲಾ ಎರಡಲ್ಲ. ಪ್ರತಿಯೊಬ್ಬರೂ ಇದರ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಚಿತ್ರರಂಗ ಹಾಗೂ ಕಿರುತೆರೆ ಕೂಡಾ ಇದಕ್ಕೆ ಹೊರತಾಗಿಲ್ಲ. ಕೆಲವೊಂದು ಧಾರಾವಾಹಿಗಳು ಈಗಾಗಲೇ ಪ್ರಸಾರ ನಿಲ್ಲಿಸಿದೆ. ಒಂದೆಡೆ ಧಾರಾವಾಹಿಗೆ ವೀಕ್ಷಕರ ಕೊರತೆಯಾದರೆ ಮತ್ತೊಂದೆಡೆ ಧಾರಾವಾಹಿಗಳ ಚಿತ್ರೀಕರಣ ಜರುಗುತ್ತಿಲ್ಲ.
ಅರ್ಧದಲ್ಲೇ ಸ್ಥಗಿತವಾಗುತ್ತಿರುವ ಧಾರಾವಾಹಿಗಳಲ್ಲಿ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಕೂಡಾ ಒಂದು. ಈಗಾಗಲೇ ಕಾವ್ಯಶಾಸ್ತ್ರಿ ಹಾಗೂ ವಿನಯ್ ಗೌಡ ಧಾರಾವಾಹಿ ಮುಕ್ತಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಧಾರಾವಾಹಿಯಲ್ಲಿ ಜನನಿಯಾಗಿ ಮಿಂಚಿದ್ದ ಛಾಯಾಸಿಂಗ್ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ.
- " class="align-text-top noRightClick twitterSection" data="
">
'ಸರೋಜಿನಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ನಟನಾ ಯಾನ ಆರಂಭಿಸಿದ ಛಾಯಾ ಸಿಂಗ್, ನಂತರ 'ಪ್ರೇಮ ಕಥೆಗಳು' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಕನ್ನಡ ಕಿರುತೆರೆ, ಬೆಳ್ಳಿತೆರೆ ಮಾತ್ರವಲ್ಲದೆ ತೆಲುಗು, ತಮಿಳು ಕಿರುತೆರೆ ಬೆಳ್ಳಿತೆರೆಯಲ್ಲಿ ಹೆಸರು ಮಾಡಿರುವ ಅವರು, ಮತ್ತೆ ಕನ್ನಡ ಕಿರುತೆರೆಗೆ ಬಂದು 'ನಂದಿನಿ' ಧಾರಾವಾಹಿಯಲ್ಲಿ ಅಭಿನಯಿಸಲು ಆರಂಭಿಸಿದರು.
ಧಾರಾವಾಹಿ ತಂಡದೊಂದಿಗೆ ತಮಾಷೆ ಮಾಡುತ್ತಿರುವ ವಿಡಿಯೋವೊಂದನ್ನು ಛಾಯಾಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. "ಎಲ್ಲಾ ವಿದಾಯಗಳು ದುಃಖದಿಂದ ಕೂಡಿರುವುದಿಲ್ಲ. ಅದಕ್ಕೆ 'ನಂದಿನಿ'ಯೇ ಸಾಕ್ಷಿ. ಧಾರಾವಾಹಿ ಮುಗಿಯಿತು ನಿಜ, ಆದರೆ ನಾನು ಈ ಧಾರಾವಾಹಿಯನ್ನು ಇದೇ ನಗು ಹಾಗೂ ಉತ್ಸಾಹದಿಂದ ನೆನಪು ಮಾಡಿಕೊಳ್ಳುತ್ತೇನೆ. ಈ ಧಾರಾವಾಹಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು. ಈ ಪ್ರಾಜೆಕ್ಟ್ಗಾಗಿ ನನ್ನನ್ನು ಆಯ್ಕೆ ಮಾಡಿದ ರಮೇಶ್ ಅರವಿಂದ್ ಹಾಗೂ ಸಂಜೋತಾ ಅವರಿಗೆ ಧನ್ಯವಾದಗಳು. ಧಾರಾವಾಹಿ ನೋಡಿ ಹರಸಿ, ಹಾರೈಸಿದ ಪ್ರೇಕ್ಷಕರಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳು" ಎಂದು ಛಾಯಾಸಿಂಗ್ ಬರೆದುಕೊಂಡಿದ್ದಾರೆ.