ETV Bharat / sitara

ಪ್ರೀತಿಸಿದ ಹುಡುಗಿಯೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದ ಚಂದು ಗೌಡ - ಲಕ್ಷ್ಮಿ ಬಾರಮ್ಮ ಧಾರವಾಹಿಯ ಚಂದು ಗೌಡ

ಕೋವಿಡ್ ಕಾರಣದಿಂದಾಗಿ ಸರಳವಾಗಿ ಚಂದು ಗೌಡ ಹಾಗೂ ಶಾಲಿನಿ ವಿವಾಹ ನಡೆದಿದ್ದು, ಕೇವಲ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

marriage
marriage
author img

By

Published : Oct 30, 2020, 11:34 AM IST

Updated : Oct 30, 2020, 12:10 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ಬಾರಮ್ಮ'ದಲ್ಲಿ ನಾಯಕ ಚಂದನ್ ಆಗಿ ಅಭಿನಯಿಸುತ್ತಿರುವ ಚಂದು ಗೌಡ ತಮ್ಮ ಬಹುಕಾಲದ ಗೆಳತಿ ಶಾಲಿನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಸರಳವಾಗಿ ಚಂದು ಗೌಡ ಅವರ ವಿವಾಹೋತ್ಸವ ನಡೆದಿದ್ದು, ಕೇವಲ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಸಂಭ್ರಮದಲ್ಲಿ ಭಾಗಿಯಾಗಿದ್ದರು.

chandu gowda marries girlfriend
ಚಂದು ಗೌಡ ಹಾಗೂ ಶಾಲಿನಿ

ವೃತ್ತಿಯಲ್ಲಿ ಮಾಡೆಲ್ ಆಗಿರುವ ಶಾಲಿನಿ ಅವರನ್ನು ಚಂದು ಗೌಡ ಭೇಟಿಯಾದದ್ದು ಸ್ನೇಹಿತರ ಮೂಲಕ. ಬಳಿಕ ಸ್ನೇಹ, ಪ್ರೀತಿಯಾಗಿ ಚಿಗುರೊಡೆದಿತ್ತು. ಹೀಗೆ ಕಳೆದ ನಾಲ್ಕು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಇನ್ನು ಇಬ್ಬರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆಯ ಮುದ್ರೆ ಒತ್ತಿದ್ದು ಇದೀಗ ಸತಿ ಪತಿಗಳಾಗಿದ್ದಾರೆ.

chandu gowda marries girlfriend
ಶಾಲಿನಿ ಹಾಗು ಚಂದು ಗೌಡ

ತುಂಬಾ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನ ಶುರು ಮಾಡಿರುವ ಈ ಜೋಡಿ ಕೊರೊನಾ ಕಾರಣದಿಂದ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿಲ್ಲ.

chandu gowda marries girlfriend
ಶಾಲಿನಿ ಹಾಗು ಚಂದುಗೌಡ

ಸದ್ಯ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಚಂದು ಗೌಡ ಚಾಟ್ ಕಾರ್ನರ್ ಕಾರ್ಯಕ್ರಮದ ಮೂಲಕ ನಿರೂಪಕರಾಗಿ ಮೋಡಿ ಮಾಡಲಿದ್ದಾರೆ.

ಇದರ ಜೊತೆಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ಇವರ ಅಭಿನಯದ ದ್ವಿಪಾತ್ರ, ಕಮರೊಟ್ಟು ಚೆಕ್‌ಪೋಸ್ಟ್, ಕುಷ್ಕ, ಜಾಕ್ ಪಾಟ್ ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ.

Last Updated : Oct 30, 2020, 12:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.