ETV Bharat / sitara

ಚಂದನ ಈಗ ನಟಿ ಮಾತ್ರವಲ್ಲ ನಿರೂಪಕಿ ಕೂಡಾ...ಆ ಕಾರ್ಯಕ್ರಮ ಯಾವುದು...? - ಚಂದನ ಅನಂತಕೃಷ್ಣ ಈಗ ನಿರೂಪಕಿ

ಬಿಗ್​ಬಾಸ್​​​ನಿಂದ ಹೊರಬಂದ ಚಂದನ ಅನಂತಕೃಷ್ಣ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಕಾರ್ಯಕ್ರಮ 'ಹಾಡು ಕರ್ನಾಟಕ' ನಿರೂಪಕಿಯಾಗಿ ಆಯ್ಕೆಯಾಗಿದ್ದಾರೆ. 'ಪುಟ್ಮಲ್ಲಿ ', 'ರಾಜ ರಾಣಿ ' ಧಾರಾವಾಹಿ ಮೂಲಕ ಕಿರಿತೆರೆಯಲ್ಲಿ ಮಿಂಚಿರುವ ಮುದ್ದು ಗೊಂಬೆ ಚಂದನಾಗೆ ನಿರೂಪಣೆ ಕ್ಷೇತ್ರ ಹೊಸದು.

Chandana Ananthakrishna
ಚಂದನ ಅನಂತಕೃಷ್ಣ
author img

By

Published : Jan 21, 2020, 11:45 AM IST

ಬಿಗ್​​​ಬಾಸ್​ ಸೀಸನ್ 7 ರ ಸ್ಪರ್ಧಿಯಾಗಿದ್ದ ಚಂದನ ಅನಂತಕೃಷ್ಣ 11 ನೇ ವಾರದಲ್ಲಿ ತಮ್ಮ ದೊಡ್ಮನೆ ಜರ್ನಿ ಮುಗಿಸಿ ಹೊರಬಂದಿದ್ದಾರೆ. ಚಂದನ ಯಾರು ಎಂಬುದು ಎಲ್ಲರಿಗೂ ತಿಳಿದಿರಲಿಲ್ಲ. ಆದರೆ ಯಾವಾಗ ಚಂದನ ಬಿಗ್​​ಬಾಸ್​​​​ಗೆ ಹೋಗಿಬಂದರೋ ಅವರ ಅದೃಷ್ಟದ ಬಾಗಿಲು ತೆರೆಯಿತು.

Chandana Ananthakrishna
ಚಂದನ ಅನಂತಕೃಷ್ಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಕಾರ್ಯಕ್ರಮ 'ಹಾಡು ಕರ್ನಾಟಕ' ನಿರೂಪಕಿಯಾಗಿ ಚಂದನ ಆಯ್ಕೆಯಾಗಿದ್ದಾರೆ. 'ಪುಟ್ಮಲ್ಲಿ ', 'ರಾಜ ರಾಣಿ ' ಧಾರಾವಾಹಿ ಮೂಲಕ ಕಿರಿತೆರೆಯಲ್ಲಿ ಮಿಂಚಿರುವ ಮುದ್ದು ಗೊಂಬೆ ಚಂದನಾಗೆ ನಿರೂಪಣೆ ಕ್ಷೇತ್ರ ಹೊಸದು. ಇದೇ ಮೊದಲ ಬಾರಿ ಅವರು ನಿರೂಪಣೆಗೆ ಬಂದಿದ್ದಾರೆ. ಮೊದಲ ಬಾರಿ ನಿರೂಪಣೆ ಮಾಡಿದಾಗ ಚಂದನ ಸ್ವಲ್ಪ ನರ್ವಸ್ ಆಗಿದ್ದರಂತೆ. ಆದರೆ ನಂತರ ಸರಿ ಆಯಿತು ಎನ್ನುವ ಚಂದನ ಈಗಾಗಲೇ ಪ್ರೋಮೋ ಶೂಟಿಂಗ್​​​​​​​​​​​​​​​​​​​​​​​ನಲ್ಲಿ ಭಾಗವಹಿಸಿದ್ದಾರೆ. ಅವರ ಮುದ್ದಾದ ನಿರೂಪಣೆಗೆ ವಾಹಿನಿಯಿಂದಲೂ ಕೂಡಾ ಗ್ರೀನ್ ಸಿಗ್ನಲ್ ಸಿಕ್ಕಿದೆ.

Chandana Ananthakrishna
ಚಂದನ ಈಗ 'ಹಾಡು ಕರ್ನಾಟಕ' ನಿರೂಪಕಿ

ಹಾಡು ಕರ್ನಾಟಕದ ನಿರೂಪಕಿಯಾಗಿ ವೀಕ್ಷಕರ ಮುಂದೆ ಬರಲಿರುವ ಚಂದನ ಅದಕ್ಕೆಂದೇ ಸಾಕಷ್ಟು ವರ್ಕೌಟ್​​ ಕೂಡಾ ಮಾಡುತ್ತಿದ್ದಾರೆ. ಭಾಷೆಯ ಮೇಲಿನ ಹಿಡಿತಕ್ಕೆ ಕನ್ನಡ ಪತ್ರಿಕೆಯನ್ನು ಪ್ರತಿದಿನ ತಪ್ಪದೆ ಓದುತ್ತಿದ್ದಾರಂತೆ. ಕನ್ನಡಿ ಮುಂದೆ ನಿಂತು ನಿರೂಪಣೆ ಮಾಡುವುದದನ್ನು ಕೂಡಾ ಕಲಿಯುತ್ತಿದ್ದಾರೆ. ಜೊತೆಗೆ ಬೇರೆ ನಿರೂಪಕರು ಹೇಗೆ ನಿರೂಪಣೆ ಮಾಡುತ್ತಾರೆ ಎಂದು ಕೂಡಾ ಚಂದನ ಗಮನಿಸುತ್ತಿದ್ದಾರಂತೆ. ಅರಳು ಹುರಿದಂತೆ ಮಾತನಾಡುವ ಅಕುಲ್ ಬಾಲಾಜಿ ಚಂದನ ಅವರಿಗೆ ಫೇವರೆಟ್ ಆ್ಯಂಕರ್ ಎಂದು ಅವರೇ ಹೇಳಿಕೊಂಡಿದ್ದಾರೆ.

Intro:Body:ಬಿಗ್ ಬಾಸ್ ಸೀಸನ್ 7 ರ ಸ್ಫರ್ದಿಯಾಗಿದ್ದ ಚಂದನಾ 11 ನೇ ವಾರದಲ್ಲಿ ತಮ್ಮ ದೊಡ್ಮನೆಯ ಜರ್ನಿ ಮುಗಿಸಿ ಹೊರಬಂದಿದ್ದಾರೆ. ಅದ್ಯಾವಾಗ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದರೂ ಅವರ ಅದೃಷ್ಟದ ಬಾಗಿಲು ಕೂಡಾ ತೆರೆದುಕೊಂಡಿತ್ತು. ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭಚವಾಗಲಿರುವ ಹೊಚ್ಚ ಹೊಅ ಸಿಂಗಿಂಗ್ ಶೋ ಹಾಡು ಕರ್ನಾಟಕದ ನಿರೂಪಕಿಯಾಗಿ ಅವರು ಆಯ್ಕೆಯಾಗಿದ್ದಾರೆ.

ಪುಟ್ಮಲ್ಲಿ, ರಾಜ ರಾಣಿ ಧಾರಾವಾಹಿಯ ಮೂಲಕ ಕಿರಿತೆರೆಯಲ್ಲಿ ಮಿಂಚಿರುವ ಮುದ್ದು ಗೊಂಬೆ ಚಂದನಾ ಗೆ ನಿರೂಪಣೆ ಕ್ಷೇತ್ರ ಹೊಸತು! ಅಂದರೆ ಅವರು ಇದೇ ಮೊದಲ ಬಾರಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೇ ಮೊದಲ ಬಾರಿ ನಿರೂಪಣೆ ಮಾಡಿದಾಗ ಚಂದನಾ ಅವರು ಕೊಂಚ ನರ್ವಸ್ ಆಗಿದ್ದರಂತೆ. ಆದರೆ ಆಮೇಲೆ ಸರಿ ಆಯಿತು ಎನ್ನುವ ಚಂದನಾ ಈಗಾಗಲೇ ಪ್ರೋಮೋ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಅವರ ಮುದ್ದಾದ ನಿರೂಪಣೆಗೆ ವಾಹಿನಿಯಿಂದಲೂ ಕೂಡಾ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹಾಡು ಕರ್ನಾಟಕದ ನಿರೂಪಕಿಯಾಗು ವೀಕ್ಷಕರ ಮುಂದೆ ಬರಲಿರುವ ಯಡವಟ್ ರಾಣಿ ಚುಕ್ಕಿ ಆಲಿಯಾಸ್ ಚಂದನಾ ಅದಕ್ಕೆಂದೇ ಸಾಕಷ್ಟು ವರ್ಕ್ ಔಟ್ ಕೂಡಾ ಮಾಡುತ್ತಿದ್ದಾರೆ. ಈಗಾಗಲೇ ಜಾಸ್ತಿ ಕನ್ನಡ ಮತ್ತು ಇಂಗ್ಲಿಷ್ ನ್ಯೂಸ್ ಪೇಪರ್ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.ಇದರಿಂದ ಭಾಷೆಯ ನೇಲಿನ ಹಿಡಿತ ಕೂಡಾ ಜಾಸ್ತಿಯಾಗುತ್ತದೆ. ಮಾತ್ರವಲ್ಲ, ಕನ್ನಡಿ ಮುಂದೆ ನಿಂತು ನಿರೂಪಣೆ ಮಾಡುವುದನ್ನು ಕೂಡಾ ಅವರು ಕರಗತ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಬೇರೆ ಭಾಷೆಯಲ್ಲಿ ನಿರೂಪಕರು ಹೇಗೆ ನಿರೂಪಣೆ ಮಾಡುತ್ತಾರೆ ಎಂದು ಗಮನಿಸಿಕೊಳ್ಳುವ ಚೆಂದುಳ್ಳಿ ಚೆಲುವೆಗೆ ಅಕುಲ್ ಬಾಲಾಜಿ ಫೇವರಿಟ್ ಆ್ಯಂಕರ್! ಅಕುಲ್ ಬಾಲಾಜಿ ಫುಲ್ ಜೋಶ್ ನಲ್ಲಿ ಅರಳು ಹುರಿದಂತೆ ಪಟಪಟನೆ ಮಾತನಾಡುವುದೇ ಆಕೆಗೆ ಇಷ್ಟ ಎಂದು ಹೇಳುವ ಚಂದನಾ ಸದ್ಯಕ್ಕೆ ಹಾಡು ಕರ್ನಾಟಕ' ಮಾತ್ರ ಒಪ್ಪಿಕೊಂಡಿದ್ದಾರೆ.ಇದರ ಹೊರತಾಗಿ ಬೇರೆ ಯಾವ ಪ್ರಾಜೆಕ್ಟ್‌ನ್ನೂ ನಾನು ಒಪ್ಪಿಕೊಂಡಿಲ್ಲ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.