ETV Bharat / sitara

ದೊಡ್ಮನೆಯಲ್ಲಿ ಕಳಪೆ ಪ್ರದರ್ಶನ.... ಜೈಲು ಸೇರಿದ ಬ್ರೋ ಗೌಡ

author img

By

Published : Mar 13, 2021, 7:28 AM IST

ಈ ಬಾರಿ ಬಿಗ್​ ಬಾಸ್​​​ ಮನೆಯಲ್ಲಿ ರಾಜೀವ್ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಎರಡು ವಾರಗಳ ಕಾಲ ಕ್ಯಾಪ್ಟನ್ ಆಗಿದ್ದ ಶಮಂತ್ ಕಳಪೆ ಪ್ರದರ್ಶನ ನೀಡಿದ ಕಾರಣ ಜೈಲು ಸೇರಿದ್ದಾರೆ.

Bro gowda went to jail
ಬ್ರೋ ಗೌಡ

ಬಿಗ್​ ಬಾಸ್ ಕನ್ನಡ ಸೀಸನ್​ 8ರಲ್ಲಿ ಎರಡು ವಾರಗಳ ಕಾಲ ಕ್ಯಾಪ್ಟನ್ ಆಗಿದ್ದ ಶಮಂತ್ ಈಗ ಜೈಲು ಪಾಲಾಗಿದ್ದಾರೆ. ಎರಡು ವಾರಗಳ ಕ್ಯಾಪ್ಟನ್ಸಿಯಲ್ಲಿ ಶಮಂತ್​ ಅವರ ಪರ್ಫಾಮೆನ್ಸ್​ ಹೇಗಿತ್ತು ಎಂಬುದನ್ನು ಬಿಗ್​ ಬಾಸ್​ ಪರಿಶೀಲಿಸಿದ್ದಾರೆ. ಮನೆಯ ಇತರೆ ಸದಸ್ಯರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟಾಸ್ಕ್​​ ಮಾತ್ರವಲ್ಲದೆ ಒಟ್ಟಾರೆ ನಡವಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಶಮಂತ್​ಗೆ ಎಲ್ಲರೂ ಕಳಪೆ ಹಣೆಪಟ್ಟಿ ನೀಡಿದ್ದಾರೆ.

Bro gowda went to jail
ಬಿಗ್ ಬಾಸ್ ಸೀಸನ್ 8

ಇದನ್ನೂ ಓದಿ: ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಸೋನಾಕ್ಷಿ, ಜಾನ್​ ಅಬ್ರಹಾಂ, ಮೃಣಾಲ್ : ವಿಡಿಯೋ

ಬಿಗ್​ ಬಾಸ್​ ನಿಯಮದಂತೆ ವಾರದಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಜೈಲುವಾಸ ಅನುಭವಿಸಬೇಕು. ಅದರ ಪ್ರಕಾರ ಶಮಂತ್​ರನ್ನು ಜೈಲಿಗೆ ಕಳಿಸಲಾಗಿದೆ. ಖೈದಿಯ ಬಟ್ಟೆ ಧರಿಸಿ ಶಮಂತ್​ ಜೈಲು ಸೇರಿಕೊಂಡಿದ್ದಾರೆ. ಆದರೆ ಅದನ್ನು ಅವರು ಚಾಲೆಂಜ್​ ಆಗಿ ತೆಗೆದುಕೊಂಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆಯೇ ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈಗ ಮೂರನೇ ವಾರದ ಕ್ಯಾಪ್ಟನ್ ಆಗಿ ರಾಜೀವ್ ಗೌಡ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್​​​​ಗಾಗಿ ನಡೆದ ಲಾಕ್‌ಡೌನ್ ಆಟ ರದ್ದುಗೊಳ್ಳಲು ಕಾರಣರಾದವರಿಗೆ ಮಸಿ ಬಳೆಯುವಂತೆ ಬಿಗ್ ಬಾಸ್ ಆದೇಶಿಸಿದ್ದರಿಂದ ಕೆಲವರಿಗೆ ಮಸಿ ಬಳಿಯಲಾಯ್ತು. ಮಸಿ ಬೀಳದ ಸ್ಪರ್ಧಿಗಳಿಗೆ ಮತ್ತೊಂದು ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ರಾಜೀವ್ ಗೆಲುವು ಸಾಧಿಸಿ ಕ್ಯಾಪ್ಟನ್ ಆಗಿದ್ದಾರೆ. ಹುಡುಗಿ‌‌ ಪಟಾಯಿಸೋಕೆ ಹೋದ ಶಮಂತ್ ಎಲ್ಲಿಗೆ ಹೋದ್ರು...?ಒಬ್ಬರನ್ನಾದರೂ ಪಟಾಯಿಸು ಎಂದು ಶಮಂತ್​​​​​​​​​​​​​​​​ಗೆ, ಶುಭಾ‌ಪೂಂಜಾ ಚಾಲೆಂಜ್ ಮಾಡಿದ್ದಾರೆ. ಹೀಗಾಗಿ, ಶಮಂತ್ ಕ್ಯಾಪ್ಟನ್ಸಿ‌ಯಿಂದ ನಿರಾಳವಾಗಿ ದಿವ್ಯ ಉರುಡುಗ ಕಡೆ ತಮ್ಮ ಗಮನ ನೀಡಿದ್ದಾರೆ. ಆದರೆ, ಕಥೆ ಆರಂಭವಾಗುವ ಮುನ್ನವೇ ಜೈಲು ಸೇರಿದ್ದಾರೆ.

Bro gowda went to jail
3ನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದ ರಾಜೀವ್ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.