ಕನ್ನಡ ಬಿಗ್ ಬಾಸ್ ಸೀಸನ್ 8ರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಎಂಟ್ರಿ ಕೊಟ್ಟು ಮೂರೇ ದಿನಕ್ಕೆ ವಾಪಸ್ ಹೋದ ನಟಿ ವೈಜಯಂತಿ ಆನ್‌ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವಿದೇಶದಲ್ಲಿರುವ ಪ್ರಿಯಕರ ಸೂರಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಆನ್ಲೈನ್ನಲ್ಲಿ ಲೈವ್ ಮೂಲಕ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವೈಜಯಂತಿ ಅವರ ಪ್ರಿಯಕರ ಕುಟುಂಬದವರೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಕೊರೊನಾ ನಿರ್ಬಂಧ ಹಾಗೂ ನಿಯಮಗಳ ಕಾರಣ ಭಾರತಕ್ಕೆ ಸೂರಜ್ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಆನ್ಲೈನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇನ್ನೂ ಮದುವೆ ದಿನಾಂಕ ತಿಳಿದು ಬಂದಿಲ್ಲ.
ವೈಜಯಂತಿ ಅವರು ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಪುತ್ರಿ. 'ಅಮ್ಮಚ್ಚಿ ಎಂಬ ನೆನಪು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತಿಚೇಗೆ ನಡೆದ ಬಿಗ್ ಬಾಸ್ ಮನೆಗೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಆದರೆ, ಮೂರೇ ದಿನಕ್ಕೆ ಮನೆಯಿಂದ ಹೊರ ಬಂದಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬದಲಾವಣೆ... ಹೀಗೂ ಆಗುತ್ತಾ? ಹೌದು ಸ್ವಾಮಿ!