ETV Bharat / sitara

ಸ್ಪರ್ಧಿಗಳಿಗೆ ಎರಡು ಲಕ್ಷ ನಗದು ಗೆಲ್ಲುವ ಅವಕಾಶ ನೀಡಿದ ಬಿಗ್​ಬಾಸ್ - ಬಿಗ್​ಬಾಸ್ ಸೀಸನ್​ 8

ಈ ವಾರ ಪೂರ್ತಿ ಟಾಸ್ಕ್​​ ನೀಡಲಾಗುತ್ತಿದ್ದು, ವಾರದ ಕೊನೆಯಲ್ಲಿ ಹೆಚ್ಚು ಅಂಕ ಗಳಿಸಿದವರು ಎರಡು ಲಕ್ಷ ರೂಪಾಯಿ ಗೆಲ್ಲಲಿದ್ದಾರೆ.

bigg-boss-give-chance-of-winning-2-lakh-rupees
ಸ್ಪರ್ಧಿಗಳಿಗೆ ಎರಡು ಲಕ್ಷ ನಗದು ಗೆಲ್ಲುವ ಅವಕಾಶ ನೀಡಿದ ಬಿಗ್​ಬಾಸ್
author img

By

Published : Aug 3, 2021, 12:52 AM IST

ಬಿಗ್​ಬಾಸ್ ಸೀಸನ್-8 ರಿಯಾಲಿಟಿ ಶೋ ಫಿನಾಲೆ ವಾರ ತಲುಪಿದೆ. ಇದೀಗ ಮನೆಯಲ್ಲಿ ವೈಯಕ್ತಿಕ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಮನೆಯ ಓರ್ವ ಸದಸ್ಯ ಎರಡು ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ. ಇದಕ್ಕಾಗಿ ವಾರ ಪೂರ್ತಿ ಟಾಸ್ಕ್​​ಗಳನ್ನು ನೀಡುತ್ತಿದ್ದು, ವಾರದ ಕೊನೆಯಲ್ಲಿ ಹೆಚ್ಚು ಅಂಕಗಳಿಸಿದ ಸ್ಪರ್ಧಿ ಎರಡು ಲಕ್ಷ ಬಹುಮಾನ ಗೆಲ್ಲಬಹುದಾಗಿದೆ.

ಸೋಮವಾರ ಬಿಗ್​ಬಾಸ್ ಎರಡು ಟಾಸ್ಕ್ ನೀಡಿದ್ದರು. ಮರಗಾಲನ್ನು ಕಟ್ಟಿಕೊಂಡು ನಡೆಯುವ ಟಾಸ್ಕ್​ನಲ್ಲಿ ಅರವಿಂದ್ ಹೆಚ್ಚು ಅಂಕ ಗಳಿಸಿದರೆ, ಚಿಕ್ಕ ವಯಸ್ಸಿನ ಫೋಟೊ ನೋಡಿ ಯಾರು ಈ ಸ್ಪರ್ಧಿ ಎಂದು ಗುರುತಿಸುವ ಟಾಸ್ಕ್​ನಲ್ಲಿ ಪ್ರಶಾಂತ್ ಹಾಗೂ ದಿವ್ಯ ಸುರೇಶ್ ಹೆಚ್ಚು ಅಂಕ ಗಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಿಗ್​ಬಾಸ್ ಕಠಿಣ ಟಾಸ್ಕ್ ಗಳನ್ನು ನೀಡಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಓರ್ವ ಸ್ಪರ್ಧಿ ಮನೆಯಿಂದ ಹೊರ ಬರಲಿದ್ದಾರೆ. ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಅರವಿಂದ್ ಕೆ.ಪಿ., ವೈಷ್ಣವಿ ಗೌಡ ಹಾಗೂ ಮಂಜು ಪಾವಗಡ ಅವರು ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: ಕಾಮಕ್ಕೆ ಪ್ರಚೋದಿಸಿ 200 ಯುವತಿ,100 ವಿವಾಹಿತೆಯರಿಗೆ ಬ್ಲ್ಯಾಕ್ ಮೇಲ್: 23ರ ಯುವಕ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.