ಹೈದರಾಬಾದ್, ತೆಲಂಗಾಣ : ಬಿಗ್ ಬಾಸ್ ಸೀಸನ್ 15ರ ವೀಕೆಂಡ್ ವಾರ್ನಲ್ಲಿ ಶಮಿತಾ ಶೆಟ್ಟಿ ಭಾವುಕರಾಗಿದ್ದಾರೆ. ಬಾಲಿವುಡ್ ನಟಿ ಹಾಗೂ ಸಹ ಸ್ಪರ್ಧಿಯಾದ ರಾಖಿ ಸಾವಂತ್ ಗೇಲಿ ಮಾಡಿದ ಕಾರಣಕ್ಕೆ ಶಮಿತಾ ಕಣ್ಣೀರು ಹಾಕಿದ್ದು, ಇದ್ದ ಜಾಗದಿಂದ ಬೇರೆಡೆ ತೆರಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ತನ್ನ ತಲೆಗೂದಲನ್ನು ಒಣಗಿಸುವಾಗ ಹಾಗೂ ಪಾತ್ರೆಗಳನ್ನು ತೊಳೆಯುವಾಗ ಕೈ ನೋವು ಅನುಭವಿಸುತ್ತಿರುವ ಬಗ್ಗೆ ಕೆಲವು ವೀಕ್ಷಕರಲ್ಲಿ ಕುತೂಹಲ ಮೂಡಿತ್ತು. ಈ ಬಗ್ಗೆ ನಟ ಸಲ್ಮಾನ್ ಖಾನ್ ವೀಕೆಂಡ್ ವಾರ್ನಲ್ಲಿ ಶಮಿತಾ ಅವರನ್ನು ಪ್ರಶ್ನೆ ಮಾಡಿದ್ದರು.
- " class="align-text-top noRightClick twitterSection" data="
">
ಈ ವೇಳೆ ಪ್ರತಿಕ್ರಿಯೆ ನೀಡಿದ ನಟಿ ಹಾಗೂ ಸಹ ಸ್ಪರ್ಧಿಯಾದ ರಾಖಿ ಸಾವಂತ್ ಹಾವಭಾವಗಳ ಮೂಲಕ ವ್ಯಂಗ್ಯ ಮಾಡಿ, ಶಮಿತಾ ಶೆಟ್ಟಿಯವರ ನೋವನ್ನು ಹೀಯಾಳಿಸಿದ್ದಾರೆ. ಇದೇ ವೇಳೆ ನನಗೆ ಕೈ ನೋವಿದ್ದು, ತಲೆ ಒಣಗಿಸಿಕೊಳ್ಳುವಾಗ ಕೈಯನ್ನು ನೇರವಾಗಿ ಮೇಲಕ್ಕೆ ಎತ್ತಬಹುದು.
ಪಕ್ಕದಿಂದ ಮೇಲಕ್ಕೆ ಎತ್ತಲು ಸಾಧ್ಯವಿಲ್ಲ ಎಂದು ಶಮಿತಾ ನೋವನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಶಮಿತಾ ಸ್ಥಳದಿಂದ ಅಳುತ್ತಲೇ ತೆರಳಿದ್ದಾರೆ. ಮುಂದಿನ ಎಪಿಸೋಡ್ನಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಹೊರ ಬೀಳಲಿವೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕಚ್ಚಿದ ಹಾವು: ಹೇಗಿದೆ ಆರೋಗ್ಯ ಸ್ಥಿತಿ?