ETV Bharat / sitara

ತಾಂತ್ರಿಕ ದೋಷಗಳಿಂದ ಬಿಗ್ ಬಾಸ್ ಸೀಸನ್-8 ಗ್ರಾಂಡ್ ಫಿನಾಲೆಗೆ ಕಂಟಕ!

ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಶನಿವಾರ ಬೆಳಗ್ಗೆಯೇ ಪ್ರಾರಂಭವಾಗಿ ಭಾನುವಾರ ಬೆಳಗಿನ ಜಾವದವರೆಗೂ ನಡೆಯುತ್ತಿತ್ತು. ಸತತವಾಗಿ ಎರಡು ಕಂತುಗಳ ಚಿತ್ರೀಕರಣ ಮುಗಿಸಲಾಗುತ್ತಿತ್ತು. ಬೇಗ ಶೂಟಿಂಗ್ ಮಾಡಿ ಮುಗಿಯುತ್ತಿದ್ದರಿಂದ, ಭಾನುವಾರ ಸಂಜೆಗೆಲ್ಲ ವಿನ್ನರ್ ಯಾರು ಎಂದು ಗೊತ್ತಾಗುತ್ತಿತ್ತು. ಆದ್ರೆ ಈ ಬಾರಿಯ ಫಿನಾಲೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ.

author img

By

Published : Aug 8, 2021, 9:50 AM IST

ಬಿಗ್ ಬಾಸ್-8 ಗ್ರಾಂಡ್ ಫಿನಾಲೆಗೆ ಕಂಟಕ
ಬಿಗ್ ಬಾಸ್-8 ಗ್ರಾಂಡ್ ಫಿನಾಲೆಗೆ ಕಂಟಕ

ಕನ್ನಡದ ಬಿಗ್ ಬಾಸ್ ಸೀಸನ್ 8 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಶನಿವಾರ ರಾತ್ರಿ ಗ್ರಾಂಡ್ ಫಿನಾಲೆಯ ಮೊದಲ ಹಂತ ಮುಗಿದಿದ್ದು, ಇಂದು ರಾತ್ರಿ ಬಿಗ್ ಬಾಸ್​​ನ ವಿನ್ನರ್ ಯಾರು ಎಂಬ ವಿಷಯ ಬಹಿರಂಗವಾಗಲಿದೆ. ಆದರೆ, ತಾಂತ್ರಿಕ ದೋಷಗಳಿಂದ ಸಾಕಷ್ಟು ಎಡವಟ್ಟುಗಳಾಗಿವೆ.

ಶನಿವಾರದ ಕಂತಿನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಔಟ್ ಆಗಿದ್ದಾರೆ. ಆದರೆ, ತಾಂತ್ರಿಕ ದೋಷಗಳಿಂದಾಗಿ ಕಾರ್ಯಕ್ರಮ ಸಾಕಷ್ಟು ವಿಳಂಬವಾಗಿದೆ. ಅಸಲಿಗೆ ಆರು ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಕಾರ್ಯಕ್ರಮವು 6.30ಕ್ಕೆ ಪ್ರಾರಂಭವಾಯಿತು.

ಆ ನಂತರವೂ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರಿಂದ, ತೋರಿಸಿದ್ದನ್ನೇ ತೋರಿಸಲಾಯಿತು. ಎದೆ ತುಂಬಿ ಹಾಡುವೆನು, ಕನ್ಯಾಕುಮಾರಿ ಮತ್ತು ಲಕ್ಷಣ ಕಾರ್ಯಕ್ರಮಗಳ ಪ್ರೋಮೋಗಳನ್ನು ಪದೇ ಪದೇ ತೋರಿಸಿ ಪ್ರೇಕ್ಷಕರಿಗೆ ಕಿರಿಕಿರಿ ಮಾಡಲಾಯಿತು. ಜತೆಗೆ ಕನ್ನಡತಿಯ ಕನ್ನಡ ಕ್ಲಾಸ್​​ಗಳನ್ನು ಸಹ ಒಂದರಹಿಂದೊಂದು ತೋರಿಸಲಾಯಿತು.

ಕಾರ್ಯಕ್ರಮ ಅದೆಷ್ಟು ವಿಳಂಬವಾಯಿತು ಎಂದರೆ, ಪ್ರಶಾಂತ್ ಸಂಬರಗಿ ಮನೆಯಿಂದ ಹೊರಟಾಗಲೇ ರಾತ್ರಿ 10.30 ಆಗಿತ್ತು. ವೈಷ್ಣವಿ ಗೌಡ ಅವರ ಎಲಿಮಿನೇಷನ್ 12 ಗಂಟೆಯಾದರೂ ಮುಗಿದಿರಲಿಲ್ಲ. ಮನೆಯಿಂದ ಯಾರು ಹೊರಬರಬಹುದು ಎಂಬ ಕುತೂಹಲದಿಂದ ಅಲ್ಲಿಯವರೆಗೂ ಕಾದು ಕುಳಿತಿದ್ದ ಪ್ರೇಕ್ಷಕರು, ಬೇಸರದಿಂದ ನಿದ್ದೆಗೆ ಜಾರಿದರು.

ಇದನ್ನೂ ಓದಿ : ಬಿಗ್​ಬಾಸ್ ಸೀಸನ್-8ರ​ ವಿನ್ನರ್​ ಪಡೆಯಲಿರುವ ಮೊತ್ತವೆಷ್ಟು ಗೊತ್ತೇ?

ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಶನಿವಾರ ಬೆಳಗ್ಗೆಯೇ ಪ್ರಾರಂಭವಾಗಿ ಭಾನುವಾರ ಬೆಳಗಿನ ಜಾವದವರೆಗೂ ನಡೆಯುತ್ತಿತ್ತು. ಸತತವಾಗಿ ಎರಡು ಕಂತುಗಳ ಚಿತ್ರೀಕರಣ ಮುಗಿಸಲಾಗುತ್ತಿತ್ತು. ಬೇಗ ಶೂಟಿಂಗ್ ಮಾಡಿ ಮುಗಿಯುತ್ತಿದ್ದರಿಂದ, ಭಾನುವಾರ ಸಂಜೆಗೆಲ್ಲ ವಿನ್ನರ್ ಯಾರು ಎಂಬುದು ಗೊತ್ತಾಗುತ್ತಿತ್ತು.

ಆದರೆ, ಈ ಬಾರಿ ಅಷ್ಟು ಬೇಗ ಗೊತ್ತಾಗಬಾರದು, ಕೊನೆಯವರೆಗೂ ಕುತೂಹಲ ಇರಬೇಕು ಎಂದು ಶನಿವಾರ ಮತ್ತು ಭಾನುವಾರ ಎರಡೂ ದಿನಗಳ ಕಾಲ ಗ್ರಾಂಡ್ ಫಿನಾಲೆ ಪ್ಲಾನ್ ಮಾಡಲಾಗಿದೆ. ಸಾಕಷ್ಟು ಗೊಂದಲ ಮತ್ತು ತಾಂತ್ರಿಕ ದೋಷಗಳಿಂದ ಎಲ್ಲವೂ ವಿಳಂಬವಾಗಿದೆ. ಕುತೂಹಲದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೂ ನಿರಾಸೆಯಾಗಿದೆ.

ಶನಿವಾರ ರಾತ್ರಿಯ ಕಂತೇನೋ ಗೊತ್ತಾಗದಂತೆ ಮುಗಿದು ಹೋಯಿತು. ಇಂದಿನ ಎಪಿಸೋಡ್ ಆದರೂ ಯಾವುದೇ ಸಮಸ್ಯೆ ಇಲ್ಲದೆ, ಹೇಳಿದ ಸಮಯಕ್ಕೆ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.