ETV Bharat / sitara

ಬಿಗ್​ಬಾಸ್​ ಮಿಡ್ ವೀಕ್ ಎಲಿಮಿನೇಷನ್​.. ಇಂದು ಇವರಿಗೆ ತೆರೆಯುತ್ತಾ ಮನೆಯ ಮುಖ್ಯದ್ವಾರ? - ಬಿಗ್​ಬಾಸ್ ಕನ್ನಡ

ಭಾನುವಾರ ಬೆಳಗ್ಗೆಯಿಂದಲೇ ಬಿಗ್​ಬಾಸ್​ ಮನೆಯಲ್ಲಿ ಒಂದು ಫೋನ್​ ಬೂತ್​ ಇಡಲಾಗಿದೆ. ಇಷ್ಟು ವಾರಗಳ ಬಿಗ್​ಬಾಸ್ ಪ್ರಯಾಣದ ಅನುಭವವನ್ನು ದೂರವಾಣಿಯಲ್ಲಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ. ಮಿಡ್ ​ವೀಕ್​ ಎಲಿಮಿನೇಷನ್​ ಇಂದು ನಡೆಯಲಿದ್ದು, ಚಕ್ರವರ್ತಿ ಚಂದ್ರಚೂಡ್​ ಮನೆಯಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗ್ತಿದೆ.

ಬಿಗ್​ಬಾಸ್​ ಮಿಡ್ ವೀಕ್ ಎಲಿಮಿನೇಷನ್
ಬಿಗ್​ಬಾಸ್​ ಮಿಡ್ ವೀಕ್ ಎಲಿಮಿನೇಷನ್
author img

By

Published : Jul 27, 2021, 1:46 PM IST

ಬಿಗ್​ಬಾಸ್​ ಮಿಡ್ ವೀಕ್ ಎಲಿಮಿನೇಷನ್​ ಬಗ್ಗೆ ಸೂಚನೆಯೊಂದು ಸಿಕ್ಕಿದ್ದು, ಯಾವ ಸ್ಪರ್ಧಿ ದೊಡ್ಮನೆಯಿಂದ ಹೊರ ನಡೆದಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಭಾನುವಾರ ಬೆಳಗ್ಗೆಯಿಂದಲೇ ಮನೆಯಲ್ಲಿ ಒಂದು ಫೋನ್​ ಬೂತ್​ ಇಡಲಾಗಿದೆ. ಮನೆಗೆ ನೀಡುವ ಸಂದೇಶವನ್ನು ಬಿಗ್​ಬಾಸ್ ಫೋನ್ ಮೂಲಕವೇ ನೀಡುತ್ತಿದ್ದಾರೆ. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​ ಅವರು ಫೋನ್​ನಲ್ಲಿ ಮಾತನಾಡಿದ್ದಾರೆ.

ಇಷ್ಟು ವಾರಗಳ ಬಿಗ್​ಬಾಸ್ ಪ್ರಯಾಣದ ಅನುಭವವನ್ನು ದೂರವಾಣಿಯಲ್ಲಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ. ನಂತರ, ಐವರಲ್ಲಿ ಒಬ್ಬರ ಬಿಗ್​ ಬಾಸ್​ ಪ್ರಯಾಣ ಕೊನೆಯಾಗಲಿದೆ‌. ಇನ್ನೆರೆಡು ನಿಮಿಷದಲ್ಲಿ ಬಾಗಿಲು ತೆರೆಯಲಿದೆ ಎಂದು ಬಿಗ್​ಬಾಸ್​ ಹೇಳಿದ್ರು. ಆ ಸಂದರ್ಭದಲ್ಲಿ ಪ್ರಶಾಂತ್ ‌ಸಂಬರಗಿ ಕಣ್ಣೀರು ಹಾಕಿದ್ದಾರೆ.

ಮೂಲಗಳ ಪ್ರಕಾರ ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್ ಆಗಿದ್ದಾರೆ‌ ಎನ್ನಲಾಗ್ತಿದೆ. ಮಿಡ್ ​ವೀಕ್​ ಎಲಿಮಿನೇಷನ್​ ಆದಕಾರಣ ಸುದೀಪ್​ ಅನುಪಸ್ಥಿತಿಯಲ್ಲೇ ಕಂಟೆಸ್ಟಂಟ್​ ಮನೆಯಿಂದ ಹೊರನಡೆಯಲಿದ್ದಾರೆ.

ಚಕ್ರವರ್ತಿ ಚಂದ್ರಚೂಡ್
ಚಕ್ರವರ್ತಿ ಚಂದ್ರಚೂಡ್

ಇಂದು ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಈ ವಾರದ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ‌ಮಾಡಿರುವ ಪ್ರೋಮೋದಲ್ಲಿ ಎಲಿಮಿನೇಟ್ ಸುತ್ತು ಇಂದು ಪ್ರಸಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.